ಸಕಲೇಶಪುರ ಪಟ್ಟಣದಲ್ಲಿ ಮದರಸಾಗಳ ಮೇಲೆ ನಿಷೇಧ ಹೇರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೆರಾಮಸೇನೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ಮದರಸಾ ಶಿಕ್ಷಣ ನಿಷೇಧಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ

ಸಕಲೇಶಪುರ: ರಾಜ್ಯದಲ್ಲಿ ದ್ವೇಷ ಮತ್ತು ಮತಾಂಧತೆ ಬಿತ್ತುತ್ತಿರುವ ಮದರಸಾ ಶಿಕ್ಷಣಕ್ಕೆ ನಿಷೇಧ ಹೇರಲು ಸರ್ಕಾರ ಕ್ರಮ ಕೈಗೊಳಬೇಕೆಂದು ಶ್ರೀ ರಾಮಸೇನೆ ಜಿಲಾಧ್ಯಕ್ಷ ಜಾನೆಕೆರೆ ಹೇಮಂತ್ ಹೇಳಿದ್ದಾರೆ.

ಪಟ್ಟಣದಲ್ಲಿ ಮದರಸಾಗಳ ನಿಷೇಧ ಕುರಿತಂತೆ ಉಪವಿಭಾಗಾಧಿಕಾರಿ ಕಚೇರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ ನಂತರ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಮದರಸಾಗಳು ಸರಕಾರದ ಅನುದಾನದಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಮದರಸಾಗಳಲ್ಲಿ ದೇಶ ವಿರೋಧಿ ಮತ್ತು ರಾಷ್ಟ್ರ ವಿರೋಧಿ ವಿಷಯ, ಬಹುಸಂಖ್ಯಾತ ಹಿಂದುಗಳ ವಿರುದ್ಧ ದ್ವೇಷಗಳನ್ನು ಬಿತ್ತಲಾಗುತ್ತಿರುವ ವಿಷಯಗಳು ಗಮನಕ್ಕೆ ಬರುತ್ತಿದೆ ಎಂದರು.

ರಾಷ್ಟ್ರೀಯ ತನಿಖಾ ದಳವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಗಳ ಮೇಲೆ ದಾಳಿ ಮಾಡಿದ ಸಂರ್ಧರ್ಭದಲ್ಲಿ ಮದರಸಾಗಳನ್ನು ಕಾನೂನು ಬಾಹಿರ ಚಟುವಟಿಕೆಗಳಗೆ ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಸರ್ಕಾರ ಕೂಡಲೇ ಮದರಸಾ ಶಿಕ್ಷಣವನ್ನು ನಿಷೇಧಿಸಬೇಕು ಎಂದು ತಿಳಿಸಿದರು.

ಹಲವು ಸಂದಭರ್ಗಳಲ್ಲಿ ರಾಜ್ಯದ ಹಲವು ಮದರಸಾ ಶಿಕ್ಷಕರು, ವಿದ್ಯಾರ್ಥಿಗಳು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾಗ ಪೋಲಿಸರು ಬಂಧನ ಮಾಡಿದ್ದಾರೆ. ಇಂದು ಕರ್ನಾಟಕದ ಹಲವು ಕೋಮುಗಲಭ ಪ್ರಕರಣದಲ್ಲಿ, ದಂಗೆ, ಹತ್ಯೆ, ದ್ವೇಷ ಬಿತ್ತುವ ಪ್ರಕರಣದಲ್ಲಿ ಮದರಸ ವಿದ್ಯಾರ್ಥಿಗಳು, ಶಿಕ್ಷಕರು, ಮೌಲ್ವಿಗಳು ಭಾಗಿಯಾಗಿರುವುದು ಗಮನಕ್ಕೆ ಬರುತ್ತಿದೆ. ಆದ್ದರಿಂದ ಸರ್ಕಾರ ರಾಜ್ಯದ ಧಾರ್ಮಿಕ ಸೌರ್ಹದತೆಯ ವಾತಾವರಣವನ್ನು ಕಾಪಾಡಲು ಸರ್ಕಾರವು ಈ ಎಲ್ಲ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿ ಇರುವ ಮದರಸಾಗಳ ತನಿಖೆ ನಡೆಸಿ, ಅಲ್ಲಿ ಯಾವ ವಿಷಯ ಬೋಧಿಸಲಾಗುತ್ತದೆ ಎಂದು ಪರಿಶೀಲನೆ ಮಾಡಬೇಕು. ಮತಾಂಧತೆಯ ಪ್ರಚಾರವಾಗುವುದನ್ನು ತಡೆಯಲು ಮದರಸಾದ ಶಿಕ್ಷಣದ ಮಾನ್ಯತೆಯನ್ನು ರದ್ದು ಗೊಳಿಸಬೇಕೆಂದು ಅಗ್ರಹಿಸಿದರು.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮನು ಜಗತ್, ಪ್ರಧಾನ ಕಾರ್ಯದರ್ಶಿ ಬೇಲೂರ್ ಹೇಮಂತ್, ಸಂಘಟನೆಯ ತಾಲೂಕು ಅಧ್ಯಕ್ಷ ಭರತ್ ಕುಮಾರ್ ದೇಖ್ಲ, ತಾ.ಕಾರ್ಯದರ್ಶಿ ಲೋಕೇಶ್, ಬೇಲೂರ್ ತಾ. ಅಧ್ಯಕ್ಷ ನಾಗೇಶ್, ಅರಕಲಗೂಡು ತಾ. ಅಧ್ಯಕ್ಷ ಅನಿಲ್ ಇದ್ದರು.