ಜಿಲ್ಲೆ

ಮದನೂರನಲ್ಲಿ ಯೋಧರಿಗೆ ಸನ್ಮಾನ

ಕಮಲನಗರ: ಸ್ವಾತಂತ್ರೊತ್ಸವ ನಿಮಿತ್ತ ತಾಲೂಕಿನ ಮದನೂರ ಗ್ರಾಮ ಪಂಚಾಯಿತಿಯಿಂದ ದೇಶ ಸೇವೆ ಸಲ್ಲಿಸಿದ ೩೩ ಜನರನ್ನು ಮಂಗಳವಾರ ಗೌರವಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಖತಗಾಂವ ಹಾಗೂ ಮದನೂರ ಗ್ರಾಮದ ನಿವೃತ್ತರಾದ ಹಾಗೂ ಸೇವಾನಿರತ ಯೋಧರಿಗೆ, ಪೊಲೀಸರಿಗೆ, ಅಗ್ನಿಶಾಮಕ ದಳದವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಪೂಜಾ ಬೆಲ್ಲೆ ರಾಷ್ಟ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಎಲ್ಲ ವಲಯಗಳಲ್ಲಿಯೂ ಮಿತಿ ಮೀರಿದೆ. ಸಾಮಾನ್ಯರು ಬದುಕುವುದು ದುಸ್ತರವಾಗಿದೆ. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸಿದರೆ ಭಾರತ ವಿಶ್ವಗುರು ಆಗುತ್ತದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಚಂದ್ರಕಲಾ ರಮೇಶ, ಪಿಡಿಒ ರಾಮದಾಸ ಬೇಲೂರೆ ಇತರರಿದ್ದರು.