ಜಿಲ್ಲೆ

ಮದನಮೋಹನ್ ಪ್ರಾಮಾಣಿಕ ಪತ್ರಕರ್ತ

ಕಲಬುರಗಿ: ಹಿರಿಯ ಪತ್ರಕರ್ತ ಎಂ.ಮದನಮೋಹನ್ ಅವರ ನಿಧನದಿಂದ ಪತ್ರಿಕೋದ್ಯಮ ಜಗತ್ತು, ಓರ್ವ ಪ್ರಾಮಾಣಿಕ ಪತ್ರಕರ್ತನನ್ನು ಕಳೆದುಕೊಂಡಿದೆ ಎಂದು ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣ್ಣೂರ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮದನಮೋಹನ್ ಅವರು ಜೀವಿತಾವಧಿಯಲ್ಲಿ ಹಲವಾರು ಪತ್ರಕರ್ತರನ್ನು ಬೆಳೆಸಿದ್ದಾರೆ. ಅವರೊಬ್ಬ ಮಾಹಿತಿಗಳ ಗುಚ್ಛವಾಗಿದ್ದು, ನಮ್ಮನ್ನಗಲಿರುವುದು ದುಃಖದ ಸಂಗತಿ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ.ಶಿವಾನಂದನ್ ಮಾತನಾಡಿ, ಮದನ್‌ಮೋಹನ್ ನನಗೆ ತಂದೆಯ ಸ್ಥಾನದಲ್ಲಿದ್ದರು. ನಾನಿಂದು ಏನಾಗಿz್ದÉÃನೆ ಮತ್ತು ನನ್ನನ್ನು ಪತ್ರಕರ್ತನನ್ನಾಗಿ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಪತ್ರಿಕೋದ್ಯಮದ ಸಮಗ್ರ ಜ್ಞಾನ ಹೊಂದಿದ್ದರು. ಮದನ್‌ಮೋಹನ್ ಅವರು ಬರೆದಿರುವ ಪಂಚಾಯತ್‌ರಾಜ್ ಸಂಸ್ಥೆಗಳ ಸರಣಿ ಲೇಖನಗಳು ದಿ ಹಿಂದೂ ಪತ್ರಿಕೆಯಲ್ಲಿ ಪ್ರಮುಖವಾಗಿ ಪ್ರಕಟವಾದವು. ಪಶ್ಚಿಮ ಬಂಗಾಳದ ಪಂಚಾಯತ್‌ರಾಜ್ ಸಂಸ್ಥೆಗಳ ಮಾದರಿಯಲ್ಲಿ ರಾಜ್ಯದಲ್ಲೂ ಈ ವ್ಯವಸ್ಥೆ ಪರಿಚಯಿಸುವ ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರದ ನಿರ್ಧಾರಕ್ಕೆ ಬೆಳಕು ನೀಡಿದವು ಎಂದರು.
ಮದನಮೋಹನ್ ನಿಕಟವರ್ತಿ ಎಸ್.ಎಸ್.ಹಿರೇಮಠ ಮಾತನಾಡಿ, ಅಧಿಕೃತ ಉz್ದÉÃಶಕ್ಕಾಗಿ ಕಲಬುರಗಿಗೆ ಬಂದಾಗಲೆಲ್ಲಾ ಮದನಮೋಹನ್ ಅವರೊಂದಿಗೆ ಸ್ವಲ್ಪ ಸಮಯ ಕಳೆದದ್ದು ನೆನಪಿಸಿಕೊಂಡ ಅವರು, ಪರಿಪೂರ್ಣ ಪತ್ರಕರ್ತ ಹಾಗೂ ಸಂಪೂರ್ಣ ಸಂಭಾವಿತ ವ್ಯಕ್ತಿ ಎಂದು ಹೇಳಿದರು.
ಪತ್ರಕರ್ತ ಪ್ರವೀಣ್ ಪಾರಾ ಇದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಚೇರ್‌ಪರ್ಸನ್ ಡಾ.ಸುನೀತಾ ಪಾಟೀಲ್ ನಿರೂಪಣೆ ಮಾಡಿದರು.