ಬೀರೂರು ಪುರಸಭೆಯಿಂದ ಮದಗದ ಕೆರೆಗೆ ಬಾಗಿನ ಸಮರ್ಪಿಸಲಾಯಿತು. ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಜಿ.ಪ್ರಕಾಶ್, ಎಂ.ಪಿ.ಸುದರ್ಶನ್ ಇತರರಿದ್ದರು. 
ಜಿಲ್ಲೆ

ಮದಗದ ಕೆರೆಗೆ ಬಾಗಿನ ಸಮರ್ಪಣೆ

ಬೀರೂರು: ಕಡೂರು ತಾಲೂಕಿನ ರೈತರಿಗೆ ನೀರು ನೀಡುವ ಮದಗದ ಕೆರೆ ಕೋಡಿಬಿದ್ದಿರುವುದರಿಂದ ಎಲ್ಲರಲ್ಲೂ ಸಂತೋಷ ತಂದಿದೆ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್ ತಿಳಿಸಿದರು.

ಮದಗದ ಕೆರೆಗೆ ಮಂಗಳವಾರ ಪುರಸಭೆಯಿಂದ ಬಾಗಿನ ಸಮರ್ಪಿಸಿ ಮಾತನಾಡಿ, ತಾಲೂಕಿನಲ್ಲಿ ಬರ ಆವರಿಸಿದರೂ ಮದಗದ ಕೆರೆ ಮಾತ್ರ ತುಂಬಿ ಹರಿದು ರೈತರಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ. ಇಲ್ಲಿರುವ ಶ್ರೀ ಕೆಂಚಮ್ಮ ತಾಯಿ ರೈತರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಕೆರೆ ತುಂಬಿ ರೈತರಿಗೆ ಹರ್ಷ ನೀಡುವುದಷ್ಟೇ ಅಲ್ಲದೆ ತಾಲೂಕಿನ 32ಕ್ಕೂ ಹೆಚ್ಚು ಕೆರೆಗಳಿಗೆ ನೀರು ನೀಡುವ ಮೂಲಕ ಜೀವನಾಡಿಯಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಬೀರೂರಲ್ಲಿ ಅಡಕೆ ಬೆಳೆ ಪ್ರಧಾನವಾಗಿದ್ದು, ಅಡಕೆ ಬೆಳೆಗಾರರು ಕೆರೆಯನ್ನು ಪೂಜಿಸುತ್ತಾರೆ. ಕೆರೆಯಿಂದ ಅಂತರ್ಜಲವೂ ವೃದ್ಧಿಸುತ್ತದೆ. ಆದ್ದರಿಂದ ಈ ಭಾಗದ ಜನತೆಗೆ ಮದಗದ ಕೆರೆ ಜೀವನಾಡಿಯಾಗಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಎಂ.ಪಿ.ಸುದರ್ಶನ್, ಶಾರದಾ ರುದ್ರಪ್ಪ, ಜ್ಯೋತಿ, ರವಿಕಾಂತ್ ರಾಥೋಡ್, ಬಿ.ಆರ್.ಮೋಹನ್‌ಕುಮಾರ್, ಮುಖಂಡರಾದ ರುದ್ರಪ್ಪ, ವೆಂಕಟೇಶ್, ಕೃಷ್ಣಮೂರ್ತಿ, ಬಸವರಾಜ್, ಮೂರ್ತಣ್ಣ, ಪರಿಸರ ಅಭಿಯಂತರ ನೂರುದ್ದೀನ್, ಇಂಜಿನಿಯರ್ ವೀಣಾ, ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಇತರರಿದ್ದರು.