ಜಿಲ್ಲೆ

ಮದಕರಿ ಸೂಪರ್ ಕಿಂಗ್ಸ್‌ಗೆ ರೋಚಕ ಜಯ

ಚಿತ್ರದುರ್ಗ: ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ದಿ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಭಾನುವಾರ ನಡೆದ ದುರ್ಗನ್ಸ್ ಪವರ್‌ಸ್ಟಾರ್ ಕ್ರಿಕೆಟ್ ಲೀಗ್ ಫೈನಲ್ ಪಂದ್ಯದಲ್ಲಿ ಅಮೀರ್ ಚಾಲೆಂಜರ್ಸ್‌ ವಿರುದ್ಧ ಮದಕರಿ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿತು. ಈ ಮೂಲಕ 6.5 ಅಡಿ ಎತ್ತರದ ಶೀಲ್ಡ್, 1.11 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಪ್ರದರ್ಶಿಸಿದ ಚೇತನ್ ಚಾಣಕ್ಯ ಮಾಲೀಕತ್ವದ ಮದಕರಿ ಸೂಪರ್ ಕಿಂಗ್ಸ್ 6 ಓವರ್‌ಗಳಲ್ಲಿ 43 ರನ್‌ಗಳನ್ನು ಕಲೆಹಾಕಿತು. ಆನಂತರ ಫೀಲ್ಡ್‌ಗೆ ಇಳಿದ ರಫೀ ಮಾಲೀಕತ್ವದ ಅಮೀರ್ ಚಾಲೆಂಜರ್ಸ್‌ ತಂಡ 42 ರನ್ ಗಳಿಸಿದ್ದರಿಂದ 1 ರನ್‌ನಿಂದಾಗಿ ಸೋಲು ಅನುಭವಿಸಬೇಕಾಯಿತು. ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಈ ತಂಡ 5 ಅಡಿ ಎತ್ತರದ ಶೀಲ್ಡ್, 55 ಸಾವಿರ ರೂ. ನಗದು ಬಹುಮಾನ ಪಡೆಯಿತು.

ಬರಗೇರಮ್ಮ ಕ್ರಿಕೆಟರ್ಸ್‌ ಮೂರನೇ, ರೆಡ್ ಬ್ಯಾಂಕ್ಸ್ ತಂಡ ನಾಲ್ಕನೇ ಸ್ಥಾನದೊಂದಿಗೆ ತಲಾ 11 ಸಾವಿರ ನಗದು ಬಹುಮಾನ ಪಡೆದವು. 12 ತಂಡಗಳು ಭಾಗವಹಿಸಿದ್ದವು.

ಮದಕರಿ ಸೂಪರ್ ಕಿಂಗ್ಸ್ ತಂಡದ ನಾಯಕ ಮಧು, ಸಲ್ಮಾನ್, ಪ್ರದೀಪ್, ಪದ್ದು, ನಾಗೇಶ್, ಮುಸೈಫ್, ಅನ್ಸರ್, ಶ್ರೀಕಾಂತ್, ಪ್ರದೀಪ್, ರಘು, ಇಮ್ರಾನ್ ಇತರರಿದ್ದರು.