ಚಿತ್ರದುರ್ಗ: ರಂಗಯ್ಯನಬಾಗಿಲು ಸಮೀಪ ನೂತನ ನವಗ್ರಹ ದೇಗುಲ, ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಕೈಂಕರ್ಯ ಜರುಗಿದವು.
ಮದಕರಿ ಮಹಾಗಣಪತಿ ಸೇವಾ ಸಮಿತಿಯಿಂದ ಪೂಜೆ ಹಮ್ಮಿಕೊಳ್ಳಲಾಗಿದ್ದು, ಮಹಾಗಣಪತಿ ಮೂರ್ತಿಗೆ ವಿಶೇಷಾಲಂಕಾರ ಸೇವೆ ನೆರವೇರಿತು. ಅನೇಕ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.