ಚಿತ್ರದುರ್ಗ: ದಾವಣಗೆರೆ ಜಿಲ್ಲೆ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠದ ಶ್ರೀರಾಜವೀರ ಮದಕರಿ ನಾಯಕ ಪ್ರಶಸ್ತಿಗೆ ಖ್ಯಾ ತ ಸಾಹಿತಿ ಬಿ.ಎಲ್.ವೇಣು ಅವರು ಭಾಜನರಾಗಿದ್ದಾರೆ. ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ರಾಜನಹಳ್ಳಿ ಯಲ್ಲಿ ಫೆ.8ರಿಂದ ಎರಡು ದಿನಗಳ ಕಾಲ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ. 9ರಂದು ಏರ್ಪಡಿಸಿರುವ ಸಮಾ ರ ಂಭದಲ್ಲಿ ವೇಣು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇಂದು ಗೌರವ ಸಮರ್ಪಣೆ
ಕನ್ನಡ ಹಾಗೂ ಕರ್ನಾಟಕ ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾಗಿರುವ ಹಾಗೂ ಮ ದಕರಿನಾಯಕ ಪ್ರಶಸ್ತಿಗೆ ಭಾಜನರಾಗಿರುವ ವೇಣು ಅವರನ್ನು, ಫೆ.7ರಂದು ಮಧ್ಯಾಹ್ನ 12ಗಂಟೆಗೆ ಚಿತ್ರದುರ್ಗದ ಅವರ ನಿವಾಸದಲ್ಲಿ ಸೃಷ್ಠಿ ಸಾಗರ ಪ್ರಕಾಶನ ಸಂಸ್ಥೆ ಹಾಗೂ ಮದಕರಿ ಸಾಂಸ್ಕೃತಿಕ ಕೇಂದ್ರದಿಂದ ಗೌರವಿಸಲಾಗುವುದೆಂದು,ಪ್ರಕಾಶನ ಸಂಸ್ಥೆಯ ಮೇಘಗಂಗಾಧರ ನಾಯ್ಕ ಹಾಗೂ ಸಾಂಸ್ಕೃತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಅವರು ತಿಳಿಸಿದ್ದಾರೆ.