ಕಲಬುರಗಿ: ರಣಕೇಕೆ ಹಾಕುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ದಿನಗಳೆದಂತೆ ಹೆಚ್ಚಾಗುತ್ತಿದೆ. ಶುಕ್ರವಾರ ಮತ್ತೊಂದು ಪಾಸಿಟಿವ್ ಕೇಸ್ ಸೋಂಕಿತರ ಪಟ್ಟಿಗೆ ಸೇರಿದ್ದರಿಂದ ಈ ಸಂಖ್ಯೆ ಹತ್ತಕ್ಕೇರಿದೆ.
ಸದ್ಯದ ಬೆಳವಣಿಗೆಯಿಂದಾಗಿ ಜಿಲ್ಲೆ ರೆಡ್ ಝೋನ್ಗೆ ಬರುವ ಸಾಧ್ಯತೆ ಇದೆ. ಹೊಸದಾಗಿ ಸೋಂಕಿತ 55 ವರ್ಷದವನಾಗಿದ್ದು, ನಿಜಾಮುದ್ದೀನ್ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ವಾಪಸಾದವನ ಜತೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡ ವ್ಯಕ್ತಿಗೆ ಸೋಂಕು ಹರಡಿಲ್ಲ. ಆದರೆ ಆತನೊಂದಿಗೆ ಸಂಪರ್ಕ ಹೊಂದಿದ್ದವನಿಗೆ ಸೋಂಕು ಇರುವುದು ಗಂಭೀರ ವಿಷಯವಾಗಿದ್ದು, ಈತನ ವಿವರ ಮತ್ತು ಈತನೊಂದಿಗೆ ಸಂಪರ್ಕ ಹೊಂದಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸೋಂಕಿತನನ್ನು ಇಎಸ್ಐ ಆಸ್ಪತ್ರೆ ಐಸೋಲೇಷನ್ ವಾರ್ಡನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈಗಾಗಲೇ ಕರೊನಾ ಜಿಲ್ಲೆಯಲ್ಲಿ ಎರಡು ಬಲಿ ಪಡೆದಿದ್ದು, ದೇಶದಲ್ಲೇ ಮೊದಲ ಸಾವು ಆಗಿದ್ದು ಕಲಬುರಗಿಯಲ್ಲೇ ಎಂಬುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಈವರೆಗೆ 241 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿತ್ತು. 10 ಪಾಸಿಟಿವ್ ಹೊರತುಪಡಿಸಿದರೆ 189 ಜನರ ವರದಿ ನೆಗೆಟಿವ್ ಬಂದಿದೆ. ತಾಂತ್ರಿಕ ಕಾರಣಗಳಿಂದ ಇಬ್ಬರ ಟೆಸ್ಟ್ ಆಗಿಲ್ಲ. 41 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ವಾರ್ಡ್ನಲ್ಲಿ 14, 30 ಸೇರಿ ಐದು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಇಲ್ಲಿ 16456 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಡಿಸಿ ಶರತ್ ತಿಳಿಸಿದ್ದಾರೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 165, ಸೆಕೆಂಡರಿ ಕಾಂಟ್ಯಾಕ್ಟ್ಸ್ 831, ವಿದೇಶದಿಂದ ಬಂದ 487 ಜನರನ್ನು ಗುರುತಿಸಿದ್ದು, ಹೋಂ ಕ್ವಾರಂಟೈನ್ನಲ್ಲಿ 464 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನ ಹೋಂ ಕ್ವಾರಂಟೈನ್ನಲ್ಲಿದ್ದ 581 ಜನರನ್ನು ಮುಕ್ತಗೊಳಿಸಲಾಗಿದೆ. 34 ಜನರನ್ನು ಇಎಸ್ಐಸಿ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಸಂಪರ್ಕ
ಡಿಎಚ್ಓ 94498 43053, ಜಿಲ್ಲಾ ಸರ್ಜನ್ 94498 43258, ಕಲಬುರಗಿ ತಾಲೂಕು ಆರೋಗ್ಯಾಧಿಕಾರಿ 94486 52625, ಆಳಂದ ಟಿಎಚ್ಓ 98801 66490, ಅಫಜಲಪುರ ಟಿಎಚ್ಓ 78292 77554, ಚಿತ್ತಾಪುರ ಟಿಎಚ್ಓ 98457 08581, ಚಿಂಚೋಳಿ ಟಿಎಚ್ಓ 97419 70999, ಜೇವಗರ್ಿ ಟಿಎಚ್ಓ 90087 90021, ಸೇಡಂ ಟಿಎಚ್ಓ 94484 41770, ಸಹಾಯವಾಣಿ ನಂ. ಡಿಎಸ್ಯು ಕಲಬುರಗಿ 08472-268648. ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ 08472-278648/ 278698/ 278604/278677.
ಡಿಸಿ ಮನವಿ
ಕೋವಿಡ್-19 ಬಾಧಿತ ದೇಶಗಳಿಂದ ಭಾರತಕ್ಕೆ ಮರಳುವ ಯಾವುದೇ ವ್ಯಕ್ತಿ ಸೋಂಕು ಲಕ್ಷಣ ಇರಲಿ, ಇಲ್ಲದಿರಲಿ ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರಬೇಕು. ನೆಗಡಿ, ಕೆಮ್ಮು, ಶೀತ ಇದ್ದವರು ಕಡ್ಡಾಯವಾಗಿ ಹ್ಯಾಂಡ್ ಕಚರ್ೀಫ್ ಬಳಕೆ ಮಾಡಬೇಕು. ಮೇಲಿಂದ ಮೇಲೆ ಸೋಪು ಬಳಸಿ ಕೈತೊಳೆದುಕೊಳ್ಳಬೇಕು. ಜತೆಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು. ಸಾಮೂಹಿಕ ಕಾರ್ಯಕ್ರಮ, ಗುಂಪು ಸೇರುವುದು ಮಾಡಬಾರದು ಎಂದು ಸಲಹೆ ಮಾಡಿರುವ ಅವರು, ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.