ಜಿಲ್ಲೆ

ಮತ್ತೆ ಮೂವರು ಪಿಎಫ್‌ಐ ಕಾರ್ಯಕರ್ತರು ವಶಕ್ಕೆ

ಮೈಸೂರು: ಸಮಾಜದಲ್ಲಿ ಶಾಂತಿ ಕದಡುವ ಯತ್ನ ಆರೋಪದ ಹಿನ್ನೆಲೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಕಲ್ಯಾಣಗಿರಿಯ ಇಲಾಲ್ ಷರೀಫ್, ಮಂಡಿ ಮೊಹಲ್ಲಾದ ಫೈರೋಜ್ ಉಲ್ಲಾ ಹಾಗೂ ರಾಜೇಂದ್ರನಗರದ ಜಾಫರ್ ಪಾಷಾ ಬಂಧಿತ ಆರೋಪಿಗಳು.
ದೇಶಾದ್ಯಂತ ನಡೆದಿದ್ದ ಕಾರ್ಯಾಚರಣೆಯಲ್ಲಿ ಕೆಲ ದಿನಗಳ ಹಿಂದೆ ಶಾಂತಿನಗರದ ಕಲೀಮುದ್ದೀನ್ ಅಲಿಯಾಸ್ ಮೌಲಾನ ಮೊಹಮ್ಮದ್ ಖಲೀ ಉಲ್ಲಾನನ್ನು ಬಂಧಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಮತ್ತೆ ಮೂವರನ್ನು ವಶಕ್ಕೆ ಪಡೆಯಾಲಾಗಿದೆ. ಇದರಿಂದ ಬಂಧಿತ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಬಂಧಿತ ಮೂವರು ಆರೋಪಿಗಳನ್ನು ಮೈಸೂರು ಹೆಚ್ಚುವರಿ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದು, ನಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.