ತೆಲಸಂಗ: ನನ್ನ ದೇಶಕ್ಕೆ ಯಾವುದೇ ಅಪಾಯ ಬಂದರೂ, ಯಾವುದೇ ಸಂದರ್ಭದಲ್ಲೂ ಸೇನೆಯಿಂದ ಕರೆ ಬಂದರೆ ನಾವು ಮತ್ತೆ ಗಡಿಗೆ ತೆರಳಲು ಸಿದ್ಧರಿದ್ದೇವೆ ಎಂದು ನಿವೃತ್ತ ಸೇನಾಽಕಾರಿ ಹನುಮಂತ ಕುಮಠಳ್ಳಿ ಹೇಳಿದರು.
ಗ್ರಾಮದಲ್ಲಿ ನಿವೃತ್ತ ಸೈನಿಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಆಪರೇಷನ್ ಸಿಂಧೂರ್ ವಿಜಯೋತ್ಸವ ಹಾಗೂ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ವೇಳೆ ದೇಶಕ್ಕೆ ನಮ್ಮಂತಹ ನಿವೃತ್ತ ಸೈನಿಕರ ಅವಶ್ಯಕತೆ ಇದ್ದರೆ, ದಯವಿಟ್ಟು ನಮಗೆ ಕರೆ ನೀಡಿ. ನಾವು ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಿಸಲು ಸಿದ್ಧರಿದ್ದೇವೆ ಎಂದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಗಂಗಾಧರ ಹಾಗೂ ನಿವೃತ್ತ ಸೈನಿಕ ಸಂಜೀವ ಫಡತಾರೆ ಮಾತನಾಡಿ, ಆಪರೇಷನ್ ಸಿಂಧೂರ್ ಕೇವಲ ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆಯಲ್ಲ, ಇದು ನಮ್ಮ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆ ಕಾಪಾಡುವ ಬದ್ಧತೆ ತೋರಿಸುತ್ತದೆ ಎಂದರು.
ನಿವೃತ್ತ ಸೈನಿಕರಾದ ಮಹಾದೇವ ಸಾವಂತ, ಮಾರುತಿ ಚವ್ಹಾಣ, ಬಾಳು ಮೋರೆ, ಮುನ್ನಾ ಕರಜಗಿ, ಸಂಜೀವ ಫಡತಾರೆ, ಡಾ.ಬಿಎಸ್.ಕಾಮನ್, ಕೇಶವ ಉಂಡೋಡಿ, ಶಿವಯೋಗಿ ಹತ್ತಿ, ಶಿಂಧೆ, ಬಾಳು ವಾಗಮೋರೆ, ವಿಲಾಸ ಕಾಂಬಳೆ ಇದ್ದರು.