ಜಿಲ್ಲೆ

ಮತ್ತೆ ಕಳ್ಳತನಕ್ಕೆ ಇಳಿದರೆ ಹುಷಾರ್ !

ಚಿತ್ರದುರ್ಗ: ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಹಳೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದವರ (ಎಂಒಬಿ) ಪರೇಡ್ ಭಾನುವಾರ ನಗರದ ಬಡಾವಣೆ ಠಾಣೆ ಆವರಣದಲ್ಲಿ ನಡೆಯಿತು.
ಯಾವುದೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗದೆ ಉತ್ತಮ ರೀತಿ ಜೀವನ ನಡೆಸಬೇಕು. ಎಂಒಬಿಗಳ ಚಲನವಲನದ ಮೇಲೆ ಇಲಾಖೆ ನಿಗಾ ವಹಿಸಿದೆ. ಒಂದೇ ವೇಳೆ ಮತ್ತೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದರು.
ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ಮನೆಗೆ ಚೆಕ್ ಮಾಡಲು ಬಂದಾಗ ಅಲ್ಲಿರಬೇಕು. ಯಾವುದೇ ಕಾರಣಕ್ಕೂ ಮಾಹಿತಿ ನೀಡದೆ ಕೇಂದ್ರ ಸ್ಥಾನ ಬಿಡಬಾರದೆಂದು ಸೂಚಿಸಿದರು.ಬಡಾವಣೆ ಠಾಣೆ ಸಿಪಿಐ ನಯೀಂ ಅಹಮದ್, ಪಿಎಸ್‌ಐ ಟಿ.ರಘು ಇತರರಿದ್ದರು.