ಗದಗ: ಜಿಲ್ಲೆಯಲ್ಲಿ ಬುಧವಾರ 61 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1,201ಕ್ಕೆ ಏರಿದ್ದು, 728 ಸಕ್ರಿಯ ಕೇಸ್ಗಳಿದ್ದು, 448 ಜನರು ಬಿಡುಗಡೆಗೊಂಡಿದ್ದಾರೆ.
ಸೋಂಕಿತರ ಪ್ರದೇಶಗಳು: ಗದಗ- ಬೆಟಗೇರಿ ನಗರದ ಸಂಭಾಪೂರ ಪೊಲೀಸ್ ಕ್ವಾರ್ಟರ್ಸ್, ಪಂಚಾಕ್ಷರಿ ನಗರ, ಜಿಮ್ಸ್ ಹಾಸ್ಟೆಲ್, ಒಕ್ಕಲಗೇರಿ ಓಣಿ, ಎಸ್.ಎಂ. ಕೃಷ್ಣ ನಗರ, ಕನ್ಯಾಳ ಅಗಸಿ, ಆದಿತ್ಯ ನಗರ, ರಾಜೀವಗಾಂಧಿ ನಗರ, ಹುಡ್ಕೋ ಕಾಲನಿ, ಎನ್.ಬಿ. ಪಾಟೀಲ ಆಸ್ಪತ್ರೆ, ರಾಯಚೋಟೇಶ್ವರ ನಗರ, ಟ್ಯಾಗೋರ್ ರೋಡ್, ಶಿವಪುರ ಆಸ್ಪತ್ರೆ ಹತ್ತಿರ, ಉದಯನಗರ, ತಾಲೂಕಿನ ಲಕ್ಕುಂಡಿ, ಹರ್ತಿ, ಮುಳಗುಂದ.
ನರಗುಂದ ಪಟ್ಟಣದ ಗಾಡಿ ಓಣಿ, ವೈಶ್ಯಗಿರಿ, ವಿನಾಯಕ ನಗರ, ಟಿ.ಎಲ್.ಎಚ್. ಕ್ವಾರ್ಟರ್ಸ್, ಹವಾಲ್ದಾರ್ ಓಣಿ, ಸರಸ್ವತಿ ನಗರ, ತಾಲೂಕಿನ ದಂಡಾಪುರ, ಕಸಬಾ ನರಗುಂದ, ಶಿರಹಟ್ಟಿ ತಾಲೂಕಿನ ಶಿಗ್ಲಿ, ಯಳವತ್ತಿ, ಲಕ್ಷೆ್ಮೕಶ್ವರದ ಇಂದಿರಾ ನಗರ, ರೋಣ ಪಟ್ಟಣದ ತಳವಾರ ಓಣಿ, ಕಲ್ಯಾಣ ನಗರ, ಶಾಂತಿ ನಗರ, ತಾಲೂಕಿನ ವನಗುಡಿ, ಹೊಳೆಆಲೂರ, ಮುಂಡರಗಿ ಪಟ್ಟಣದ ಎ.ಡಿ. ನಗರ, ಹುಡ್ಕೋ ಕಾಲನಿ, ಜೆ.ಟಿ. ಮಠ ರಸ್ತೆ, ಕೆ.ಎಸ್.ಆರ್. ಟಿ.ಸಿ. ಡಿಪೋ, ತಾಲೂಕಿನ ಬರದೂರ, ಜಾಲವಾಡಗಿ, ಹಳ್ಳಿಗುಡಿ. ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದವರಿಗೆ ಸೋಂಕು ಪತ್ತೆಯಾಗಿದೆ.
ಮೃತರ ವಿವರ: ಹುಬ್ಬಳ್ಳಿ ಸುಭಾಸ ನಗರದ ನಿವಾಸಿ 59 ವರ್ಷದ ಪುರುಷ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಸೋಮವಾರ ಮೃತಪಟ್ಟಿದ್ದಾರೆ. ಅವರು ಜುಲೈ 19ರಂದು ದಾಖಲಾಗಿದ್ದರು. ಜುಲೈ 21ರಂದು ಕೋವಿಡ್- 19 ದೃಢಪಟ್ಟಿತ್ತು. ಉಸಿರಾಟದ ತೊಂದರೆ, ನ್ಯೂಮೋನಿಯಾದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಅವರು ಜುಲೈ 27ರಂದು ಮೃತಪಟ್ಟಿದ್ದಾರೆ.
ಲಕ್ಷೆ್ಮೕಶ್ವರ ನಗರದ ಹಳ್ಳದಕೇರಿ ಓಣಿ ನಗರದ ನಿವಾಸಿ 48 ವರ್ಷದ ಪುರುಷ ಮೃತಪಟ್ಟಿದ್ದಾರೆ. ವಿವಿಧ ತೊಂದರೆ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಿಮ್ಸ್ಗೆ ದಾಖಲಾಗಿದ್ದರು. ಜುಲೈ 24ರಂದು ಅವರಿಗೆ ಕೋವಿಡ್- 19 ದೃಢಪಟ್ಟಿತ್ತು. ತೀವ್ರ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ನ್ಯೂಮೋನಿಯಾದಿಂದ ಸೋಮವಾರ ಮೃತಪಟ್ಟಿದ್ದಾರೆ.
ಬೆಟಗೇರಿ ನಿವಾಸಿ 80 ವರ್ಷದ ಪುರುಷ ಜುಲೈ 26ರಂದು ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಜುಲೈ 26ರಂದು ಅವರಿಗೆ ಕೋವಿಡ್- 19 ದೃಢಪಟ್ಟಿತ್ತು. ಅಧಿಕ ರಕ್ತದೊತ್ತಡ ಹಾಗೂ ನ್ಯೂಮೋನಿಯಾದಿಂದಾಗಿ ಜುಲೈ 26ರಂದು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್- 19 ಮಾರ್ಗಸೂಚಿಯನ್ವಯ ನೆರವೇರಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.