ಜಿಲ್ಲೆ

ಮತ್ತಿಹಳ್ಳಿ ಪಿಡಿಒ ಶಿವರಾಜ್​ ಅಮಾನತು

ತುಮಕೂರು ಡೆಸ್ಕ್

ತಿಪಟೂರು: ಕರ್ತವ್ಯಲೋಪದಡಿ ತಾಲೂಕಿನ ಮತ್ತಿಹಳ್ಳಿ ಗ್ರಾಪಂ ಪಿಡಿಒ ಶಿವರಾಜ್​ ಅವರನ್ನು ಅಮಾನತುಗೊಳಿಸಲಾಗಿದೆ. 50 ಲಕ್ಷಕ್ಕಿಂತ ಅಧಿಕ ಸ್ವಂತ ಸಂಪನ್ಮೂಲ ಉಳ್ಳ ಗ್ರಾಪಂಗಳು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕ್ರಿಯಾ ಯೋಜನೆ ರೂಪಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಒಟ್ಟು 70 ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿರುವುದು ಹಾಗೂ 2023&-24ನೇ ಸಾಲಿನ ವರ್ಗ-2ರ ನಿಧಿ ಖಾತೆಯ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿರುವ ಸಂಬಂಧ ತಾಪಂ ಇಒ ವರದಿ ಹಿನ್ನೆಲೆ ವರದಿಯನ್ವಯ ಅಮಾನತು ಕ್ರಮ ಕೈಗೊಳ್ಳಲಾಗಿದೆ. ತಾಪಂನಿಂದ ಬಿಡುಗಡೆ ಆದೇಶ ಪಡೆಯದೇ ನಿವೇಶನಗಳನ್ನು ಕಾನೂನು ಬಾಹಿರವಾಗಿ ಅಧಿಕಾರ ವ್ಯಾಪ್ತಿ ಮೀರಿ ಬಿಡುಗಡೆ ಮಾಡಿ ಗುರುತರ ಕರ್ತವ್ಯ ಲೋಪವನ್ನು ಶಿವರಾಜ್​ ಎಸಗಿದ್ದಾರೆ. ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957 ರ ನಿಯಮಾವಳಿ ಪ್ರಕಾರ ಶಿಸ್ತು ಕ್ರಮಕ್ಕೆ ತೀರ್ಮಾನಿಸಿ ತಾಪಂ ಇಒ ಶಿಾರಸಿನಂತೆ ಅಮಾನತುಗೊಳಿಸಿ ಜಿಪಂ ಸಿಇಒ ಜಿ. ಪ್ರಭು ಆದೇಶಿಸಿದ್ದಾರೆ. ಈ ಹಿಂದೆಯು ಒಮ್ಮೆ ಶಿವರಾಜ್​ ಅಮಾನತು ಶಿೆಗೊಳಗಾಗಿದ್ದರು.