ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಪಂಗೆ ಅಧ್ಯಕ್ಷ ಸಣ್ಣ ಹೊನ್ನಪ್ಪ, ಉಪಾಧ್ಯಕ್ಷರಾಗಿ ಹಳೇಮನಿ ಕೊಟ್ರಮ್ಮ ಆಯ್ಕೆಯಾದರು.ಪ್ರಮುಖರಾದ ಎಂ.ಕೊಟ್ರೇಶಪ್ಪ, ಹನುಮನಗೌಡ, ಶ್ರವಣಕುಮಾರ, ಬೆಟ್ಟನಗೌಡ, ನಿಂಗಮ್ಮ, ಪಾರ್ವತಮ್ಮ ಇದ್ದರು. 
ಜಿಲ್ಲೆ

ಮತ್ತಿಹಳ್ಳಿ ಪಂಚಾಯಿತಿಗೆ ಸಣ್ಣಹೊನ್ನಪ್ಪ ಅಧ್ಯಕ್ಷ

ಹರಪನಹಳ್ಳಿ: ತಾಲೂಕಿನ ಮತ್ತಿಹಳ್ಳಿ ಗ್ರಾಪಂಗೆ ಅಧ್ಯಕ್ಷ ಸಣ್ಣ ಹೊನ್ನಪ್ಪ, ಉಪಾಧ್ಯಕ್ಷೆಯಾಗಿ ಹಳೇಮನಿ ಕೊಟ್ರಮ್ಮ ಆಯ್ಕೆಯಾಗಿದ್ದಾರೆ.


ಮತ್ತಿಹಳ್ಳಿ ಗ್ರಾಪಂಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಣ್ಣ ಹೊನ್ನಪ್ಪ ಹಾಗೂ ಎಂ.ಪ್ರತಿಭಾ, ಉಪಾಧ್ಯಕ್ಷ ಸ್ಥಾನಕ್ಕೆ ಹಳೆಮನಿ ಕೊಟ್ರಮ್ಮ, ಚಲುವಾದಿ ಯಲ್ಲಮ್ಮ ನಾಮಪತ್ರ ಸಲ್ಲಿಸಿದ್ದರು.


ಒಟ್ಟು 19ಸದಸ್ಯರಿದ್ದು, ಅಧ್ಯಕ್ಷ ಸ್ಥಾನದ ಮತದಾನ ಪ್ರಕ್ರಿಯೆಯಲ್ಲಿ ಎಂ.ಪ್ರತಿಭಾ 5 ಮತ, ಒಂದು ಮತ ತಿರಸ್ಕತಗೊಂಡಿದ್ದು, ಸಣ್ಣ ಹೊನ್ನಪ್ಪ 13 ಮತ ಪಡೆದು ಜಯಗಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲುವಾದಿ ಯಲ್ಲಮ್ಮ 4 ಮತ, ಹಳೆಮನಿ ಕೊಟ್ರಮ್ಮ 15 ಮತ ಪಡೆದು ಉಪಾಧ್ಯಕ್ಷಯಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸತೀಶ ಪಾಟೀಲ್ ಘೋಷಿಸಿದರು. ಪ್ರಮುಖರಾದ ಕೆಂಚನಗೌಡ, ಮತ್ತಿಹಳ್ಳಿ ರಾಮಣ್ಣ, ಕೊಟ್ರಗೌಡ, ಚನ್ನನಗೌಡ, ಅಲದಹಳ್ಳಿ ಕರಿಬಸಪ್ಪ, ಷಣ್ಮುಖಪ್ಪ, ಐ.ಬಸವರಾಜ, ಪಕ್ಷಪ್ಪ ಇದ್ದರು.