ಜಿಲ್ಲೆ

ಮತೀಯ ಮತಾಂಧತೆ ಹೆಚ್ಚಿ, ಸಾವು-ನೋವು

ಬಾಗಲಕೋಟೆ: ದೇಶದಲ್ಲಿ ಯುದ್ಧದ ಭೀತಿ ಇದೆ. ಇದನ್ನು ಅಲ್ಲಗಳೆಯುವ ಆಗಿಲ್ಲ. ಮತೀಯ ಮತಾಂಧತೆ ಹೆಚ್ಚಾಗಿ ಜನರಲ್ಲಿ ಸಾವು-ನೋವು ಅಽಕವಾಗಿ, ಕಂದಕ ಉಂಟಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತೀಯ ಮತಾಂಧತೆ ಯಾರಿಗೂ ಶಾಂತಿ ಕೊಡುವ ಪ್ರಸಂಗವಲ್ಲ. ಆದ್ದರಿಂದ ಯುದ್ಧ ಭೀತಿ ಇದೆ ಎಂದರು.

ನಾವು ಈಗಾಗಲೇ ಯುಗಾದಿ ಭವಿಷ್ಯದಲ್ಲಿ ಹೇಳಿದ್ದೇವು. ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟಿತು. ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು. ಸಾಮೂಹಿಕ ಹತ್ಯೆಯಾಗುತ್ತದೆ ಎಂದು. ಅದು ಹೇಳಿದ ಕೆಲ ದಿನಗಳಲ್ಲಿ ಕಾಶ್ಮೀರದಲ್ಲಿ ಹತ್ಯೆ ಆಯಿತು. ಅದು ಜಗತ್ತಿನಾದ್ಯಂತ ಪ್ರಸಾರ ಆಗುತ್ತದೆ, ಆಗಲೇ ಅದು ಶುರುವಾಗಿದೆ ಎಂದು ಹೇಳಿದರು.

ಪರಮಾಣು ದಾಳಿ ಮಾಡುತ್ತೇವೆ ಎನ್ನುವ ಪಾಕ್ ಹೇಳಿಕೆ ಬಗ್ಗೆ, ನಾವು ಸನ್ಯಾಸಿಗಳು. ಯಾವ ದೇಶದಲ್ಲಿ ಇರುತ್ತೇವೆ, ಯಾವ ನೆಲದಲ್ಲಿ ಇರುತ್ತೇವೆ, ಯಾವ ಅನ್ನ ತಿನ್ನುತ್ತೇವೆ, ಎಲ್ಲಿ ನೀರು ಕುಡಿಯುತ್ತೇವೆ, ಎಲ್ಲಿಯ ಗಾಳಿ ಸೇವಿಸುತ್ತೇವೆ. ಅದಕ್ಕೆ ಒಳ್ಳೆಯದಾಗಲಿ ಎಂದು ಧ್ಯಾನ, ಪ್ರಾರ್ಥನೆ ಮಾಡುವುದು, ಭಗವಂತನಿಗೆ ಬೇಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅಂತಹ ಯಾವುದೇ ಅಪಾಯ ಆಗದೇ ಇರಲಿ ಎಂದು ದೈವ ಪ್ರಾರ್ಥನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮ ಕೇಳಿ ಹತ್ಯೆ ಮಾಡಿರುವ ಬಗ್ಗೆ, ಮೌಲ್ಯವಿಲ್ಲದ ಬಾಳು ಬಾಳಲ್ಲ. ದಯೆ ಇಲ್ಲದ ಬದುಕು ಅಜ್ಞಾನದ ಪರಮಾವಽ. ಅದು ಅವರ ಕುಲವನ್ನು ಹೇಳುತ್ತದೆ, ಬುದ್ದಿಯನ್ನು ತಿಳಿಸುತ್ತದೆ. ಮೌಲ್ಯ ಕಳೆದುಕೊಂಡ ಮೇಲೆ ಅದಕ್ಕೆ ಬೆಲೆ ಇಲ್ಲ. ದಯೆ ಇಲ್ಲದ ಧರ್ಮ ಅದಾವುದು. ದಯವೆ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಅದು ಧರ್ಮವೆ ಅಲ್ಲ. ಆ ದೃಷ್ಟಿಯಿಂದ ಯಾರೇ ತಪ್ಪು ಮಾಡಿದರೂ ಅದು ತಪ್ಪೆ. ಕುರಾನ್‌ನಲ್ಲಿ ಸಣ್ಣ ಕ್ರಿಮಿಯನ್ನು ಕೊಲ್ಲಬಾರದು ಎಂದಿದೆ. ಕೊಂದರೆ ಜನರ ಕೊಂದಷ್ಟು ಪಾಪ ಬರುತ್ತದೆ ಎಂದು. ಅಂತಹ ಮಾನವೀಯ ಮೌಲ್ಯದ ದಯಾಪೂರ್ಣ ಮಾತು ಕುರಾನ್‌ನಲ್ಲಿದೆ. ಅಂತಹ ಅನುಯಾಯಿಗಳೆಂದು ಹೇಳಿಕೊಂಡು ಹೀಗೆ ಮಾಡುತ್ತಾರೆ ಎಂದರೆ ಅವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ಈಗ ನಮ್ಮಲ್ಲಿ ಸರ್ಕಾರ ಇದೆ, ಸಂವಿಧಾನಬದ್ಧ ಓಟು ತೆಗೆದುಕೊಂಡಿದ್ದಾರೆ. ಅವರು ಏನು ಬೇಕು ಅದನ್ನು ಮಾಡಬೇಕು. ನಾವು ಒಳಿತಾಗಲಿ ಎಂದು ಪ್ರಾರ್ಥನೆ ಮಾಡುವವರು. ಭಗವಂತನಲ್ಲಿ ಕೇಳುವುದೊಂದೆ ನಮ್ಮಲ್ಲಿ ಇರುವ ಶಕ್ತಿ ಎಂದರು.

ಪಹಲ್ಗಾಮ್ ದಾಳಿಗೆ ಭದ್ರತಾ ವೈಪಲ್ಯ ಕಾರಣವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಇದು ಆಳುವ ಅರಸರಿಗೆ ಸಂಬAಧಪಟ್ಟ ವಿಷಯ. ಆಳುವ ಅರಸರನ್ನು ಭದ್ರತಾ ವೈಪಲ್ಯ ಪ್ರಶ್ನೆ ಮಾಡುವ ಅಽಕಾರ ನಮಗಿಲ್ಲ. ಅದಕ್ಕೆ ಬೇರೆ ವರ್ಗ ಇದ್ದು, ಅದನ್ನು ಅವರು ಮಾಡುತ್ತಾರೆ. ನಮಗೆ ಮೈಮೇಲೆ ಖಾವಿ ಇದೆ, ಶುಭಹಾರೈಸುತ್ತೇವೆ. ನಮ್ಮ ಜೀವನ ಬೇರೆ, ಆ ಜೀವನ ಅಲ್ಲ. ನಾವು ದೇಶಕ್ಕೆ ಒಳ್ಳೆಯದಾಗಬೇಕು. ರಾಷ್ಟçಪ್ರೇಮ ಆಗಬೇಕು. ಭಾರತೀಯ ಪ್ರಜೆಗೆ ನೋವು ಆಗಬಾರದು. ಎಲ್ಲ ಕಡೆಗೂ ಸುಖ, ಶಾಂತಿ ಬರಲಿ ಎಂದು ಬಯಸೋದು ನಮ್ಮ ಕರ್ತವ್ಯವೇ ಹೊರತು, ಯಾರನ್ನೂ ಟೀಕೆ ಮಾಡುವಂತದ್ದು ನಮ್ಮದಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಒಳ್ಳೆಯ ಬುದ್ದಿ ಕೊಡಲಿ ಎಂದು ಕೋಡಿಮಠದ ಶ್ರೀಗಳು ತಿಳಿಸಿದರು.