ಕೊಡೇಕಲ್: ರೇವುನಾಯ್ಕ ತಾಂಡಾದ ಮತಗಟ್ಟೆಯ ಮತಪಟ್ಟಿ ಸರ್ವೇ ಕಾರ್ಯ ಶೀಘ್ರ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಸೂಚನೆ ನೀಡಿದರು.
ಹೋಬಳಿ ವಲಯದ ಬರದೇವನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇವುನಾಯ್ಕ ತಾಂಡಾ ಮತಗಟ್ಟೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಾಂಡಾದಲ್ಲಿ ಮತಪಟ್ಟಿ ಸಮೀಕ್ಷೆ ಕಾರ್ಯ ಹಿನ್ನೆಡೆಯಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಎಲ್ಲ ಬಿಎಲ್‌ಒಗಳು ಅಂಗನವಾಡಿ ಕರ‍್ಯಕರ್ತೆಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಶಾಂತಗೌಡ, ವಿಜಯಲಕ್ಸ್ಮೀ, ಪಿಡಿಒ ಮಲ್ಲೇಶಪ್ಪಗೌಡ ಮಾಲಿ ಪಾಟೀಲ್, ಮಲ್ಲು ವಾಲೀಕಾರ ಇತರರಿದ್ದರು.
ಗುಣಮಟ್ಟದ ಆಹಾರ ನೀಡಿ
ರೇವುನಾಯ್ಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿಸಿಯೂಟದ ಕೋಣೆಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಭೇಟಿ ನೀಡಿ ಪರಿಶೀಲಿಸಿದರು. ಸ್ವಚ್ಛತೆ ಸೇರಿ ಅಡುಗೆಗೆ ಬಳಸುವ ನೀರು, ಆಹಾರ ಪದಾರ್ಥ ಪರಿಶೀಲಿಸಿ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಸಿದ್ಧಪಡಿಸಿ ಮಕ್ಕಳಿಗೆ ನೀಡಬೇಕು ಎಂದು ಅಡುಗೆ ಸಿಬ್ಬಂದಿಗೆ ತಾಕೀತು ಮಾಡಿದರು.
ಮಕ್ಕಳಿಗೆ ಪಾಠ ಮಾಡಿದ ಡಿಸಿ
ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಡಿಸಿ ಡಾ.ಸುಶೀಲಾ ಭೇಟಿ ನೀಡಿ ಮಕ್ಕಳಿಗೆ ಕೆಲ ಪ್ರಶ್ನೆ ಮಾಡುವುದರ ಜತೆಗೆ ಸ್ವತಃ ತಾವೇ ಬೋರ್ಡ್ ಮುಂದೆ ನಿಂತು ಮಕ್ಕಳಿಗೆ ಸ್ವರ, ವ್ಯಂಜನಗಳ ಕುರಿತು ಪಾಠ ಮಾಡಿದ್ದು ವಿಶೇಷವಾಗಿತ್ತು.