ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ೨೦೨೪-೨೫ನೇ ಸಾಲಿನ ಅವಧಿಗೆ ಎಲ್ಲ ಹಂತದ ಚುನಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಮತದಾರರ ಕರಡು ಪಟ್ಟಿ ಹೊರಡಿಸಲು ಸಂಘದ ಸದಸ್ಯರಿಂದ ಮತದಾರರ ಪಟ್ಟಿ ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಕರಡು ಮತದಾರರ ಪಟ್ಟಿ ಸಿದ್ಧಪಡಿಸಲು ಜೂ.೨೫ ಕೊನೇ ದಿನವಾಗಿದ್ದು, ತಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಯ ಪಟ್ಟಿಯನ್ನು ತಯಾರಿಸಿ ಬಟಾವಣೆ ಅಧಿಕಾರಿಯಿಂದ ದೃಢೀಕರಿಸಿ ಸಂಘದ ಸಿಬ್ಬಂದಿ ಕಲ್ಯಾಣಕುಮಾರ (೯೧೬೪೦೮೫೫೫೫) ಅವರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.