ಬೆಟ್ಟದಪುರ ಸಮೀಪದ ಕೂರಗಲ್ಲು ಗ್ರಾಮದಲ್ಲಿ ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ನೇತೃತ್ವದಲ್ಲಿ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಕುಂಜಪ್ಪ ಕಾರ್ನಾಡ್, ಹರೀಶ್, ಜವರೇಗೌಡ, ಚಂದ್ರೇಗೌಡ, ದೇವೆಗೌಡ, ಶಂಕರ್, ರವಿ, ಜಗದೀಶ್, ರಾಮೇಗೌಡ ಇದ್ದರು  
ಜಿಲ್ಲೆ

ಮತದಾರರ ದಿಕ್ಕು ತಪ್ಪಿಸುತ್ತಿರುವ ಶಾಸಕ ಮಹದೇವ್

ಬೆಟ್ಟದಪುರ: ಜೆಡಿಎಸ್ ಶಾಸಕರ ದುರಾಡಳಿತಕ್ಕೆ ಮತದಾರರು ಈಗಾಗಲೇ ಬೇಸತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸವಿದೆ ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಅಭಿಪ್ರಾಯಪಟ್ಟರು.

ಸಮೀಪದ ಕೂರಗಲ್ಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ತಂದೆ ಶಾಸಕರಾಗಿದ್ದ ಸಂದರ್ಭ ತಾಲೂಕಿಗೆ ಹಲವು ಶಾಶ್ವತ ಯೋಜನೆಗಳನ್ನು ತಂದಿದ್ದರು. ಆದರೆ ಜೆಡಿಎಸ್ ಶಾಸಕರು ಹಳ್ಳಿಗಳಲ್ಲಿ ಚರಂಡಿ ರಸ್ತೆ ಅಭಿವೃದ್ಧಿಗೆ ಸೀಮಿತವಾಗಿ ತಾಲೂಕಿನ ಅಭಿವೃದ್ಧಿ ಮಾಡಿದ್ದೇನೆಂದು ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಾಲುಕೊಪ್ಪಲು ಪುಟ್ಟರಾಜು ಮಾತನಾಡಿದರು. ಸಭೆಯಲ್ಲಿ ಗ್ರಾಮದ ಮುಖಂಡ ರಾದ ನಾಗೇಶ್, ಸತೀಶ್, ಯೋಗೇಶ್, ಹರ್ಶನ್, ವೇಣು, ಕೆಂಡಗಣ್ಣಸ್ವಾಮಿ, ಶಿವರಾಜ್, ರವಿ, ಮಂಜುನಾಥ್, ಸಣ್ಣೇಗೌಡ, ಸಚಿನ್ ಸೇರಿದಂತೆ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಂಜಪ್ಪ ಕಾರ್ನಾಡ್, ಬೆಟ್ಟದಪುರ ಬ್ಲಾಕ್ ಯುವ ಘಟಕ ಅಧ್ಯಕ್ಷ ಹರೀಶ್, ಮುಖಂಡರಾದ ಜವರೇಗೌಡ, ಚಂದ್ರೇಗೌಡ, ದೇವೆಗೌಡ, ಶಂಕರ್, ರವಿ, ಜಗದೀಶ್, ರಾಮೇಗೌಡ, ಹರೀಶ್, ಕೆ.ಸಿ ಮಂಜು, ವಸಂತ್ ಕುಮಾರ್, ಯೋಗಾನಂದ, ಗಣೇಶ್ ಇದ್ದರು.