ಕಲಬುರಗಿ: ಲೋಕಸಭಾ ಚುನಾವಣೆಗೆ ಮೇ ೭ರಂದು ಮತದಾನ ನಡೆಯಲಿದ್ದು, ಮತದಾನ ಮುಕ್ತಾಯದ ೪೮ ಗಂಟೆ ಪೂರ್ವದಲ್ಲಿ ಮತಗಟ್ಟೆಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಮೇ ೫ ರ ಸಂಜೆ ೬ರಿಂದ ಮೇ ೭ರಂದು ಮತದಾನ ಮುಕ್ತಾಯವಾಗುವವರೆಗೆ ೧೪೪ ಅನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಿಸಿ, ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮೆರವಣಿಗೆ, ಸಭೆ-ಸಮಾರಂಭ ನಿಷೇಧಿಸಲಾಗಿದೆ. ಶಸ್ತç, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಮಾಡಬಹುದಾದ ಯಾವುದೇ ಮಾರಕಾಸ್ತç ತೆಗೆದುಕೊಂಡು ಹೋಗುವುದು, ಅವುಗಳೊಂದಿಗೆ ತಿರುಗಾಡುವುದು ಪ್ರತಿಬಂಧಿಸಲಾಗಿದೆ ಎಂದರು.
ಪ್ರಚೋದನಾತ್ಮಕ ಭಾಷಣ, ಕೂಗಾಟ, ಪ್ರತಿಕೃತಿ, ಚಿಹ್ನೆ ಪ್ರದರ್ಶನ, ಝೆರಾಕ್ಸ ಅಂಗಡಿ, ಬುಕ್ಸ್ ಸ್ಟಾಲ್ ಹಾಗೂ ಸೈಬರ್ ಕೆಫೆ ನಿರ್ಬಂಧಿಸಲಾಗಿದೆ. ಕಲ್ಲು, ಸ್ಫೋಟಕ ಪದಾರ್ಥ ನಿಷೇಧಿಸಲಾಗಿದೆ. ಮತಗಟ್ಟೆ ೨೦೦ ಮೀಟರ್ ಒಳಗೆ ಚುನಾವಣೆ ಪ್ರಚಾರ, ಬಹಿರಂಗ ಘೋಷಣೆ, ವಾದ್ಯ ಬಾರಿಸುವುದು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಸ್ತುಗಳ ಬಳಿ ಆಕ್ಷೇಪಾರ್ಹ ವಸ್ತು ಕಂಡು ಬಂದರೆ ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿದೆ. ಶವ ಸಂಸ್ಕಾರ, ಮದುವೆ, ಧಾರ್ಮಿಕ ಮೆರವಣಿಗೆಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಆದರೆ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ನಡೆಸಬೇಕು. ಮತ ಗಟ್ಟೆ ಸುತ್ತ ೨೦೦ ಮೀಟರ್‌ನಲ್ಲಿ ಮೊಬೈಲ್ ಫೋನ್, ಇತರೆ ಎಲೆಕ್ಟಾçನಿಕ್ಸ್ ಉಪಕರಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ನಗರ ಪೊಲೀಸ್ ಆಯುಕ್ತರು ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.