ಜಿಲ್ಲೆ

ಮತದಾನಕ್ಕೆ ವಿದ್ಯಾವಂತರಿಂದಲೇ ನಿರಾಸಕ್ತಿ: ಪರಮೇಶ್ವರಪ್ಪ

ಹಾಸನ : ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾದರೆ ಮಾತ್ರ ಉತ್ತಮ ನಾಯಕನನ್ನು ಆರಿಸಲು ಸಾಧ್ಯ. ಆದರೆ, ಮತದಾನ ಮಾಡುವಲ್ಲಿ ವಿದ್ಯಾವಂತರೆ ಹಿಂದೆ ಸರಿಯುತ್ತಿರುವುದು ವಿಪರ್ಯಾಸ ಎಂದು ನಗರಸಭೆ ಆಯುಕ್ತ ಪರಮೇಶ್ವರಪ್ಪ ವಿಷಾದ ವ್ಯಕ್ತಪಡಿಸಿದರು.
ನಗರಸಭೆ ವತಿಯಿಂದ ನಗರದ ಸಂತೇಪೇಟೆ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ನಮ್ಮ ಮತ ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಕಸವಿಲೇವಾರಿ ಮಾಡುವ ಆಟೋಗಳಿಗೆ ಮತದಾನ ಕುರಿತು ಪೋಸ್ಟರ್ ಅಂಟಿಸಿ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರು ಯಾವ ಆಮಿಷಗಳಿಗೆ ಒಳಗಾಗದೇ ನಿರ್ಭಿತಿಯಿಂದ ಮತದಾನ ಮಾಡುವುದರೊಂದಿಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಕಸವಿಲೇವಾರಿ ಮಾಡುವ ವಾಹನಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಪ್ರತಿ ಮನೆ ಮನೆಗೂ ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲೇ ಸುಮಾರು 83 ಮತಗಟ್ಟೆ ಕೇಂದ್ರಗಳಲ್ಲಿ ಶೇ.65ಕ್ಕಿಂತ ಕಡಿಮೆ ಮತದಾನ ಆಗಿರುವುದು ವಿಪರ್ಯಾಸ. ನಗರದ ಪ್ರದೇಶದಲ್ಲಿ ಹೆಚ್ಚು ವಿದ್ಯಾವಂತರೆ ಇದ್ದರೂ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಮತದಾನ ಎಂಬುದು ಪ್ರಜಾಪ್ರಭುತ್ವತದಲ್ಲಿ ನೀಡಿರುವುದು ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಯಾರು ಕೂಡ ವಂಚಿತರಾಗದೇ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಂಡು ಮತ್ತೊಬ್ಬರಿಗೆ ಪ್ರೇರಣೆ ಮಾಡಬೇಕೆಂದು ಕಿವಿಮಾತು ಹೇಳಿದರು. ನಮ್ಮ ನೆಚ್ಚಿನ ನಾಯಕನನ್ನು ಆರಿಸಿಕೊಳ್ಳುವುದಕ್ಕಾಗಿ, ಸುಭದ್ರ ಸರ್ಕಾರ ರಚನೆಗಾಗಿ ಮೇ.10ರಂದು ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಚಾರದ ವೇಳೆ ಅಭ್ಯರ್ಥಿಗಳು ನಮಗೆ ಮತ ನೀಡಬೇಕೆಂದು ಹಣ, ಇತರೆ ಆಮಿಷ ಒಡ್ಡುವ ಸಂದರ್ಭ ಎದುರಾದರೂ ತಮ್ಮ ಅಮುಲ್ಯ ಮತವನ್ನು ಮಾರಿಕೊಳ್ಳಲು ಮುಂದಾಗಬೇಡಿ. ಮತದಾನ ಮಾಡುವುದೆಂದರೇ ಅದೊಂದು ಪವಿತ್ರವಾದ ಕೆಲಸವಾಗಿದೆ ಎಂದರು.
ಮತದಾನದ ಮೂಲಕ ಸುಭದ್ರ ಸರ್ಕಾರ ತರಲು ಅನುಕೂಲಕರ ಸ್ವತಂತ್ರ ಸಿಕ್ಕಿದ್ದು, ನಿರ್ಭೀತಿಯಿಂದ ಯಾವ ಆಮಿಷಗಳಿಗೆ ಒಳಗಾಗದೇ ಮೇ.10 ರಂದು ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಿ, ಜೊತೆಗೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅವಕಾಶದಿಂದ ವಂಚಿರವಾಗಬೇಡಿ ಎಂದು ಜಾಗೃತಿ ಮೂಡಿಸಿದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ. 65ಕ್ಕೂ ಕಡಿಮೆ ಮತದಾನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಯಾಗುವಂತೆ ಮಾಡಲು ನಾವೆಲ್ಲ ಒಟ್ಟಾಗಿ ಅರಿವು ಮೂಡಿಸುತ್ತಿದ್ದೇವೆ. ಈ ಕಾರ್ಯದಲ್ಲಿ ಭಾಗಿಯಾಗಿರುವ ನಗರಸಭೆಯ ಪೌರಕಾರ್ಮಿಕರು ಹಾಗು ಕಸವಿಲೇವಾರಿ ಮಾಡುವ ಆಟೋ, ಟಿಪ್ಪರ್ ವಾಹನ ಚಾಲಕರಿಗೆ ಅಭಿನಂದನೆ ಹೇಳುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ದೊಡ್ಡಹಬ್ಬ, ಶೇಕಡ ನೂರರಷ್ಟು ಮತದಾನ ಆಗಲು ಎಲ್ಲಾರೂ ಕೈಜೋಡಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆಯ ವೆಂಕಟೇಶ್, ಪ್ರಕಾಶ್, ಪ್ರಸಾದ್, ಶಂತರಾಜು, ಕಲಾವಿದ ಬಿ.ಟಿ. ಮಾನವ ಇದ್ದರು.

ಮತದಾನಕ್ಕೆ ವಿದ್ಯಾವಂತರಿಂದಲೇ ನಿರಾಸಕ್ತಿ: ಪರಮೇಶ್ವರಪ್ಪ

ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾದರೆ ಮಾತ್ರ ಉತ್ತಮ ನಾಯಕನನ್ನು ಆರಿಸಲು ಸಾಧ್ಯ. ಆದರೆ, ಮತದಾನ ಮಾಡುವಲ್ಲಿ ವಿದ್ಯಾವಂತರೆ ಹಿಂದೆ ಸರಿಯುತ್ತಿರುವುದು ವಿಪರ್ಯಾಸ ಎಂದು ನಗರಸಭೆ ಆಯುಕ್ತ ಪರಮೇಶ್ವರಪ್ಪ ವಿಷಾದ ವ್ಯಕ್ತಪಡಿಸಿದರು.