ಜಿಲ್ಲೆ

ಮತದಾನಕ್ಕಾಗಿ ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ತಂದೆ ತಾಯಂದಿರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅಂಚೆ ಪತ್ರದ ಮೂಲಕ ಕೋರಿದ್ದಾರೆ.


ಮೈಸೂರು ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಸ್ವೀಪ್ ವತಿಯಿಂದ ನಡೆದ ಅಂಚೆ ಚೀಟಿ ಅಭಿಯಾನದಲ್ಲಿ ಶಾಲಾ ಮಕ್ಕಳು ಭಾಗವಹಿಸಿ ಪತ್ರ ಬರೆಯುವ ಮೂಲಕ ಪಾಲಕರಿಗೆ ವಿನಂತಿಸಿಕೊಂಡಿದ್ದಾರೆ

‘ಪ್ರೀತಿಯ ಅಪ್ಪ, ಅಮ್ಮನಿಗೆ ನಮಸ್ಕಾರಗಳು. ನಾವೀಗ ಕರ್ನಾಟಕ ವಿಧಾನಸಭಾ ಚುನಾವಣಾ ಹಬ್ಬಕ್ಕೆ ಸಜ್ಜ್ಜಾಗುತ್ತಿದ್ದೇವೆ. ಸದೃಢ ದೇಶದ ನಿರ್ವಾಣಕ್ಕಾಗಿ ಮೇ 10ರಂದು ಮತದಾನ ಮಾಡುವ ಮೂಲಕ ಸಂವಿಧಾನದ ಆಶಯವನ್ನು ಸಾಕಾರಗೊಳಿಸಿ’ ಎಂದು ಪತ್ರದಲ್ಲಿ ವಿದ್ಯಾರ್ಥಿಗಳು ಕೋರಿದ್ದಾರೆ.


ಮೈಸೂರು ತಾಲೂಕಿನ ಜಯಪುರ, ನಾಗವಾಲ, ಆಲನಹಳ್ಳಿ, ಹಾರೋಹಳ್ಳಿ (ಜ), ಎಂ.ಬಿ.ಹಳ್ಳಿ, ದೊಡ್ಡವಾರಗೌಡನಹಳ್ಳಿ, ವರುಣ, ಹಾರೋಹಳ್ಳಿ (ಮೆ) ಸೇರಿದಂತೆ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ.
ತಾಲೂಕು ಪಂಚಾಯಿತಿ ಇಒ ಎಚ್.ಡಿ. ಗಿರೀಶ್ ನೇತೃತ್ವದಲ್ಲಿ ಇದು ನಡೆದಿದ್ದು, ಪಿಡಿಒ, ಶಾಲಾ ಶಿಕ್ಷಕರರು ಮತದಾನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.