ಜಿಲ್ಲೆ

ಮತದಾನಕ್ಕಾಗಿ ಫಿಲಿಪೈನ್ಸ್‌ನಿಂದ ಬಂದ ವಿದ್ಯಾರ್ಥಿನಿ

ಚಿತ್ರದುರ್ಗ: ಫಿಲಿಪೈನ್ಸ್‌ನ ಪರ್ ಫ್ಯೂಚಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕೋಟೆನಗರಿಯ ಎಂ.ಆರ್.ಲಿಖಿತಾ ಚಿತ್ರದುರ್ಗದ ಜಿಲ್ಲಾ ಕೈಗಾರಿಕಾ ಕೇಂದ್ರದ ಮತಗಟ್ಟೆ ಸಂಖ್ಯೆ 230ರಲ್ಲಿ ಶುಕ್ರವಾರ ಮತ ಚಲಾಯಿಸಿದರು.

ತಂದೆ ನಿವೃತ್ತ ಡಿಡಿಪಿಐ ರೇವಣಸಿದ್ಧಪ್ಪ ಅವರು ಏ.26ರಂದು ಮತದಾನವಿದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಮತ ಚಲಾಯಿಸುವ ಉದ್ದೇಶದಿಂದಲೇ ಫಿಲಿಪೈನ್ಸ್‌ನಿಂದ ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಬಂದಿದ್ದೆ. ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಮತ ಹಾಕದೆ, ಹಿಂದೆ ಸರಿಯಬಾರದು. ಉತ್ತಮ ನಾಯಕನ ಆಯ್ಕೆಗಾಗಿ ಹಕ್ಕನ್ನು ಚಲಾಯಿಸಿದ ತೃಪ್ತಿ ಇದೆ.