ಜಿಲ್ಲೆ

ಮತದಾನ ಮಾಡಿದ ಶತಾಯುಷಿ ಸಾಂತಮ್ಮ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಂತೇನಹಳ್ಳಿಯ ಮತಗಟ್ಟೆ ಸಂಖ್ಯೆ 263ರಲ್ಲಿ ಶತಾಯುಷಿ (102) ಸಾಂತಮ್ಮ ಶುಕ್ರವಾರ ಮತದಾನ ಮಾಡಿದರು. ಚಿತ್ರದುರ್ಗದ ಮತಗಟ್ಟೆಯೊಂದರಲ್ಲಿ 96 ವರ್ಷದ ಕಮಲಾದೇವಿ ಠಾಕೂರ್ ಮತ ಚಲಾಯಿಸಿದರು.

ಹೊಳಲ್ಕೆರೆಯ ಮತಗಟ್ಟೆ ಸಂಖ್ಯೆ 179ರಲ್ಲಿ 91 ವರ್ಷದ ಎ.ಬಿ.ವಾಸುದೇವಮೂರ್ತಿ ಮತ ಚಲಾಯಿಸಿದರು. ಚಿತ್ರದುರ್ಗದ ಮತಗಟ್ಟೆಯೊಂದರಲ್ಲಿ 90 ವರ್ಷದ ಕುಸುಮಾ ಶಿವಾನಂದಯ್ಯ ಮತ ಚಲಾಯಿಸಿದರು.