ಮನೆಗಳ ಪಟ್ಟಾ ನೀಡುವಂತೆ ಆಗ್ರಹಿಸಿ ಕಂಪ್ಲಿ ಸಕ್ಕರೆ ಕಾರ್ಖಾನೆಯ ಹೌಸಿಂಗ್ ಬೋರ್ಡ್ ಕಾಲನಿಯ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಪ್ರದರ್ಶಿಸಿದರು. ನಿವಾಸಿಗಳಾದ ಲಕ್ಷ್ಮಮ್ಮ, ಹಂಪಮ್ಮ, ಮಲ್ಲಮ್ಮ, ಮಲ್ಲಿಕಾರ್ಜುನರೆಡ್ಡಿ, ಶ್ಯಾಮಾಚಾರ್, ಬಿ.ರಾಘವೇಂದ್ರ ಇತರರಿದ್ದರು. 
ಜಿಲ್ಲೆ

ಮತದಾನ ಬಹಿಷ್ಕಾರದ ಬ್ಯಾನರ್ ಪ್ರದರ್ಶನ

ಕಂಪ್ಲಿ: ಇಲ್ಲಿನ ಸಕ್ಕರೆ ಕಾರ್ಖಾನೆಯ ಹೌಸಿಂಗ್ ಬೋರ್ಡ್ ಕಾಲನಿಯ 112ಮನೆಯವರಿಗೆ ಪಟ್ಟಾ ನೀಡುವ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳೇ ಖುದ್ದು ಆಗಮಿಸಬೇಕೆಂದು ಒತ್ತಾಯಿಸಿ ಗುರುವಾರ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಪ್ರದರ್ಶಿಸಿದರು.

ಕಾಲನಿಯ ನಿವಾಸಿಗಳಾದ ಲಕ್ಷ್ಮಮ್ಮ, ಹಂಪಮ್ಮ, ಮಲ್ಲಮ್ಮ, ಆಸ್ಮಾ, ಸುಮಿತ್ರಾ, ಲಲಿತಾ, ಕವಿತಾ, ಮಲ್ಲಿಕಾರ್ಜುನರೆಡ್ಡಿ, ಶ್ಯಾಮಾಚಾರ್, ಬಿ.ರಾಘವೇಂದ್ರ, ಮೋಹನ್‌ಕುಮಾರ್, ವಸಂತರಾವ್, ಕೇಶವರೆಡ್ಡಿ ಸೇರಿ ಇತರರು ಮಾತನಾಡಿ, 60ವರ್ಷಗಳಿಂದಲೂ ಇಲ್ಲಿನ ಮನೆಗಳಲ್ಲಿ ನಿವಾಸವಿದ್ದು ನಮ್ಮ ವಾಸದ ಮನೆಯ ಪಟ್ಟಾ ನೀಡಿಲ್ಲ. ಜಿಲ್ಲಾಧಿಕಾರಿಗಳು ಖುದ್ದಾಗಿ ಇಲ್ಲಿಗೆ ಆಗಮಿಸಿ, ನಮ್ಮಲ್ಲಿಯ ದಾಖಲೆಗಳನ್ನು ಪರಿಶೀಲಿಸಿ ನಮ್ಮ ಮನವಿಯನ್ನು ಸ್ವೀಕರಿಸಿ ನ್ಯಾಯ ಒದಗಿಸಿಕೊಡುವ ಭರವಸೆ ನೀಡುವತನಕ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.