ಕಲಬುರಗಿ: ಪ್ರತಿ ಪ್ರಜೆಯೂ ಮತದಾನ ಮಾಡುವುದು ಮೂಲಭೂತ ಹಕ್ಕಾಗಿದ್ದು, ಉತ್ತಮ ರಾಷ್ಟç ನಿರ್ಮಾಣಕ್ಕೆ ಮತದಾನ ಮಾಡಿ, ಕೈ ಜೋಡಿಸಬೇಕು ಎಂದು ಜಿಪಂ ಸಿಇಒ, ಸ್ವಿಪ್ ಸಮಿತಿ ಜಿಲ್ಲಾಧ್ಯಕ್ಷ ಭಂವರ್‌ಸಿAಗ್ ಮೀನಾ ಹೇಳಿದರು.
ನಗರದ ಸರ್ವಜ್ಞ ಹಾಗೂ ಜ.ಶಿವರಾಜ ಪಾಟೀಲ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಚುನಾವಣಾ ಆಯೋಗ, ಸ್ವಿಪ್, ಜಿಲ್ಲಾಡಳಿತ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ೧೮ ವಯಸ್ಸಿನ ಪ್ರತಿ ವಿದ್ಯಾರ್ಥಿ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಮಾತನಾಡಿ, ಪ್ರಜಾಪ್ರಭುತ್ವದ ಆರೋಗ್ಯಕ್ಕಾಗಿ ಮತದಾನ ಮಾಡಬೇಕು ಎಂದರು.
ಸAಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕು. ಮತದಾನದ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಜಿಪA ಸಹಾಯಕ ಯೋಜನಾಧಿಕಾರಿ ವೀರೇಂದ್ರಕುಮಾರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ವ್ಯವಸ್ಥಾಪಕ ಮಲ್ಲಿಕಾರ್ಜುನ, ಬಸವರಾಜ ಬಿರಾದಾರ, ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಣೆ ಮಾಡಿದರು. ಸೃಜಲ್ಯ ಪ್ರಾರ್ಥಿಸಿದರು. ಪ್ರಾಚಾರ್ಯ ಎಂ.ಸಿ.ಕಿರೆದಳ್ಳಿ ವಂದಿಸಿದರು.