ಜಿಲ್ಲೆ

ಮತಗಟ್ಟೆಗಳಲ್ಲಿ ಮೊಬೈಲ್ ಕಿರಿಕಿರಿ

ಮೈಸೂರು: ಮತದಾನ ಮಾಡಲು ದಾಖಲೆಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದು, ಸಾಕಷ್ಟು ಕಡೆ ಮತಗಟ್ಟೆ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಯಿತು.
ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಆದರೆ ಹಲವು ಮತದಾರರು ತಮ್ಮ ಗುರುತಿನ ಚೀಟಿ, ಮತಗಟ್ಟೆಯ ವಿವರಗಳನ್ನು ಮೊಬೈಲ್‌ನ ಸಾಫ್ಟ್ ಕಾಫಿ ಇಟ್ಟುಕೊಂಡು ಅದನ್ನು ತೋರಿಸಲು ಮುಂದಾರರು.
ಆದರೆ ನಿಯಮದ ಪ್ರಕಾರ ಮೊಬೈಲ್‌ಗಳನ್ನು ಮತಗಟ್ಟೆ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ಪೊಲೀಸರು ಅಂತಹವರನ್ನು ವಾಪಸ್ ಕಳುಹಿಸಿದರು. ಬಳಿಕ ಮೊಬೈಲ್ ಹೊರಗಿಟ್ಟು, ಗುರುತಿನ ಚೀಟಿ, ಮತಗಟ್ಟೆಯ ವಿವರ ಇರುವ ಚೀಟಿಯನ್ನು ಮಾತ್ರ ಒಳಗೆ ಬಿಟ್ಟರು. ಇದು ಹಲವು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.