ಬಸವನಬಾಗೇವಾಡಿ ತಾಲೂಕಿನ ಮಣ್ಣೂರ ತಾಂಡಾದಲ್ಲಿ ನೂತನ ಬಸ್ ಸಂಚಾರಕ್ಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತ ಪಾಟೀಲ ಚಾಲನೆ ನೀಡಿದರು. ರಮೇಶ ರಾಠೋಡ, ಶೆಟ್ಟೆಪ್ಪ ಲಮಾಣಿ, ಮಾರುತಿ ನಾಯಕ, ಭೀಮಶಿ ಪೂಜಾರಿ ಇತರರಿದ್ದರು. 
ಜಿಲ್ಲೆ

ಮಣ್ಣೂರ ತಾಂಡಾಕ್ಕೆ ಬಸ್ ಸಂಚಾರ ಆರಂಭ

Vijayapura - Desk - Chinnayya Chinnayyanamath

ಬಸವನಬಾಗೇವಾಡಿ: ತಾಲೂಕಿನ ಮಣ್ಣೂರ ತಾಂಡಾಕ್ಕೆ ಬಸವನಬಾಗೇವಾಡಿ ಘಟಕದಿಂದ ನೂತನ ಬಸ್ ಪ್ರಾರಂಭಕ್ಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತ ಪಾಟೀಲ ಭಾನುವಾರ ಚಾಲನೆ ನೀಡಿದರು.

ಬಸವನಬಾಗೇವಾಡಿ ಘಟಕದಿಂದ ತಾಲೂಕಿನ ಮಣ್ಣೂರ ತಾಂಡಾ ಮಾರ್ಗವಾಗಿ ನಿಡಗುಂದಿ ಹಾಗೂ ಬಸವನಬಾಗೇವಾಡಿಗೆ ನೂತನ ಬಸ್ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಪಟ್ಟಣದಿಂದ ಮಣ್ಣೂರ ತಾಂಡಾಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ತಾಂಡಾದ ನಿವಾಸಿಗಳಿಗೆ ತೊಂದರೆಯಾಗಿತ್ತು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಸವನಬಾಗೇವಾಡಿಯಿಂದ ವಾಯಾ ಮಣ್ಣೂರ ತಾಂಡಾ ಮಣ್ಣೂರ ಮಾರ್ಗವಾಗಿ ನಿಡಗುಂದಿ ಪಟ್ಟಣಕ್ಕೆ ತಲುಪುತ್ತದೆ. ಅದೇ ಮಾರ್ಗವಾಗಿ ಬಸವನಬಾಗೇವಾಡಿ ಪಟ್ಟಣಕ್ಕೆ ಈ ನೂತನ ಬಸ್ ಸಂಚಾರ ಮಾಡಲಿದೆ ಎಂದು ಹೇಳಿದರು.

ರಮೇಶ ರಾಠೋಡ, ಶೆಟ್ಟೆಪ್ಪ ಲಮಾಣಿ, ಮಾರುತಿ ನಾಯಕ, ಭೀಮಶಿ ಪೂಜಾರಿ, ನಾನು ಲಮಾಣಿ, ತಾವರು ಲಮಾಣಿ, ಬಾಸು ಲಮಾಣಿ, ಟಿ.ಎ. ಲಮಾಣಿ, ಲಚ್ಚಪ್ಪ ನಾಯಕ, ರಾಮು ಹೊಸಮನಿ, ಶೇಖಪ್ಪ ನಾಯಕ, ಬಸ್ ಘಟಕದ ಮೇಲ್ವಿಚಾರಕ ಆನಂದಕುಮಾರ, ಗುರು ಪತ್ತಾರ, ನಿರ್ವಾಹಕ ಡಿ.ಬಿ. ತಳವಾರ, ಚಾಲಕ ಎಂ.ಎಂ. ಚಪ್ಪರಬಂದ್ ಇತರರಿದ್ದರು.