ಜಿಲ್ಲೆ

ಮಣಿಪುರ ಹಿಂಸಾಚಾರ ರಾಷ್ಟ್ರಪತಿ ಮಧ್ಯ ಪ್ರವೇಶಿಸಲಿ,

Yadgiri - Laxmikanth Kulkarni

ಯಾದಗಿರಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಿ ಶಾಂತಿ ಸ್ಥಾಪನೆಗೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಇಲ್ಲಿನ ಜಿಲ್ಲಾಕಾರಿಗೆ ಮನವಿ ಸಲ್ಲಿಸಲಾಯಿತು.

ಮಣಿಪುರದಲ್ಲಿ ಕಳೆದ 6 ತಿಂಗಳಿಂದ ಕುಕಿ ಹಾಗೂ ಮೈತೆಯಿ ಸಮುದಾಯದ ಮಧ್ಯೆ ಅಂತರಿಕ ಸಂಘರ್ಷ ನಡೆಯುತ್ತಲೇ ಇದೆ. ಇದನ್ನು ನಿಯಂತ್ರಿಸಲು ಮಣಿಪುರ ಹಾಗೂ ಕೇಂದ್ರ ಸರಕಾರಗಳು ಸಂಪೂರ್ಣ ವಿಫಲಗೊಂಡಿವೆ. ಏತನ್ಮಧ್ಯೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಪದಾಕಾರಿಗಳು ಆರೋಪಿಸಿದರು.

ಕುಕಿ ಸಮಾಜದ ಆ ಹೆಣ್ಣು ಮಕ್ಕಳಿಗೆ ಆಗಿದ್ದ ಹಾಗೂ ಇನ್ನೂ ಆಗುತ್ತ ಇರುವ ಮಾನಸಿಕ ಅಘಾತ ಮನೋಯಾತನೆ ಯೋಚಿಸಿದರೆ ನಾವೆಂಥ ಕ್ರೂರ ಸಮಾಜದಲ್ಲಿ ಇದ್ದೇವೆ ಎನ್ನಿಸುತ್ತಿದೆ. ರಾಕ್ಷಸರ ಗುಂಪು ಶೂದ್ರ ಸಮುದಾಯದ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿ ದಾರಿ ಉದ್ದಕ್ಕೂ ಹಿಂಸೆ ನೀಡಿದ್ದಾರೆ. ಅಲ್ಲದೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಮೇ.3 ರಂದು ಪ್ರಾರಂಭವಾದ ಈ ಗಲಭೆ ಮತ್ತು ಅಹಿತಕರ ಘಟನೆಗಳು ಸುಮಾರು 77 ದಿನಗಳು ನಿರಂತರವಾಗಿ ನಡೆಯುತ್ತಿದ್ದರೂ ಕೇಂದ್ರ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತ್ಯವನ್ನು ಸುಳ್ಳಾಗಿ, ಸುಳ್ಳನ್ನು ಸತ್ಯವಾಗಿ ಬಿಂಬಿಸಿರುವರು ಮನುವಾದಿ ಫ್ಯಾಸಿಸ್ಟ್ ಸಿದ್ದಾಂತವಾಗಿರುತ್ತವೆ. ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ದೇಶ ತನ್ನ ನೆಮ್ಮದಿಯನ್ನು ಕಳೆದುಕೊಂಡಿದೆ.ಮಣಿಪುರದ ವಿಷಯದಲ್ಲಿ ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ, ಗೋಪಾಲ ತೆಳಗೇರಿ, ಹೊನ್ನಪ್ಪ ಯಡ್ಡಳ್ಳಿ, ಸೈದಪ್ಪ ಕೂಲೂರು, ಮಲ್ಲಿನಾಥ ಸುಂಗಲಕರ್, ಲಾಲಪ್ಪ ತಲಾರಿ, ಶ್ರೀಕಾಂತ ತಲಾರಿ, ಮಲ್ಲಪ್ಪ ಶಹಾಪುರ, ಮುತ್ತಣ್ಣ ಜಿನಕೇರಾ, ಮಲ್ಲಿಕಾಜರ್ುನ ಬೇಗಾರ, ನರಸಪ್ಪ ಗಾಜರಕೋಟ ಇದ್ದರು.