ಜಿಲ್ಲೆ

ಮಣಿಪುರ ಗಲಭೆ ಪ್ರಕರಣ ಖಂಡನೆ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ

ಮೈಸೂರು: ಮಣಿಪುರದಲ್ಲಿ ಗಲಭೆ ನಿಯಂತ್ರಿಸಲು ವಿಫಲವಾಗಿರುವ ಬೀರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರು ನಗರ ಹಾಗೂ ಗ್ರಾಮಾಂತರ ಮಹಿಳಾ ಕಾಂಗ್ರೆಸ್‌ನಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಶನಿವಾರ ಧರಣಿ ನಡೆಸಿದ ಕಾರ್ಯಕರ್ತರು, ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಬೀರೇನ್ ಸಿಂಗ್ ವಿಫಲರಾಗಿದ್ದಾರೆ ಎಂದು ದೂರಿದರು.
ದೇಶದ ಹೆಣ್ಣುಮಕ್ಕಳ ನೋವಿಗೆ, ಸಾವಿಗೆ ನಾವೆಲ್ಲರೂ ದನಿಯಾಗಬೇಕಿದೆ. ಅಲ್ಲಿಯ ಜನಾಂಗೀಯ ಸಂಘರ್ಷವನ್ನು ತಡೆದು ಶಾಂತಿ ನೆಲೆಸುವಂತೆ ಮಾಡಬೇಕು. ಮಹಿಳೆಯರನ್ನು ಬೆತ್ತಲೆಗೊಳಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಜತೆಗೆ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ನಗರ ಅಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷ ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್ ಮೋದಾಮಣಿ, ಮಹಿಳಾ ಉಪಾಧ್ಯಕ್ಷೆ ಆರ್.ಪುಷ್ಪವಲ್ಲಿ, ಮಹಿಳಾ ಕಾರ್ಯಕರ್ತರಾದ ಶಾರದಾ ಸಂಪತ್, ಲತಾ ಮೋಹನ್, ಚಂದ್ರಕಲಾ, ಭವ್ಯಾ, ಲೀಲಾ ಪಂಪಾಪತಿ, ಪ್ರೇಮಾ, ರಾಜೇಶ್ವರಿ, ಸುಧಾ ಮಾದೇವಯ್ಯ, ಪುಷ್ಪಾ, ಶೋಭಾ, ಗಾಯತ್ರಿ ನಾರಾಯಣ್ ಇಂದ್ರ, ಬೃಂದಾ, ನಾಗರತ್ನ, ಕಮಲಾ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ದೇವಮಣ್ಣಿ, ಪಾರ್ವತಮ್ಮ, ಮಮತಾ, ಸೌಭಾಗ್ಯ, ನಾಗರತ್ನ, ಮಧು ಮಾಲಿನಿ, ಕಾವ್ಯಾ, ರಾಣಿ ಇತರರು ಇದ್ದರು.