ಜಿಲ್ಲೆ

ಮಣಿಗೆರೆ ಕಾಲೇಜಿಗೆ ನ್ಯಾಕ್ ತಂಡ ಭೇಟಿ


ಕೆ.ಎಂ.ದೊಡ್ಡಿ: ಸಮೀಪದ ಮಣಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದೆಹಲಿಯ ನ್ಯಾಕ್ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಸಿ.ತಮ್ಮಣ್ಣ, ನ್ಯಾಕ್ ಸಮಿತಿಯ ಚೇರ‌್ಮನ್ ಹಾಗೂ ಐಸಿಎಫ್‌ಎಐ ವಿಶ್ವವಿದ್ಯಾಲಯದ ಕುಲಪತಿ ಡಾ.ಕೇಶವ್ ಶರ್ಮಾ, ಸದಸ್ಯರಾದ ಸೆಂಟ್ರಲ್ ಯೂನಿವರ್‌ಸಿಟಿಯ ಆಂಧ್ರಪ್ರದೇಶ ನಿವೃತ್ತ ಪ್ರಾಧ್ಯಾಪಕ ರಾಮರೆಡ್ಡಿ, ಮೋದಿ ಕಾಲೇಜಿನ ಪ್ರಾಂಶುಪಾಲ ರಮಣ್‌ಲಾಲ್ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಗಳ ಬಗ್ಗೆ ಪರಿಶೀಲಿಸಿದರು.
ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ನಾನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿರುವ ತೃಪ್ತಿ ನನಗಿದೆ. ನನ್ನ ಅಧಿಕಾರದ ಅವಧಿಯಲ್ಲಿ 12 ಪ್ರೌಢಶಾಲೆಗಳು, 6 ಪದವಿ ಪೂರ್ವ ಕಾಲೇಜುಗಳು, 2 ಪದವಿ ಕಾಲೇಜುಗಳು, 2 ಐಟಿಐ ಕಾಲೇಜುಗಳು, 1 ಸ್ನಾತಕೋತ್ತರ ಕೇಂದ್ರ, 6 ಮುರಾರ್ಜಿ ಶಾಲೆಗಳು ತಂದಿರುವ ಸಂತೃಪ್ತಿ ನನಗಿದೆ ಎಂದು ತಿಳಿಸಿದರು.
ನ್ಯಾಕ್ ಸಮಿತಿಯ ಸದಸ್ಯರನ್ನು ಶಾಸಕ ಡಿ.ಸಿ.ತಮ್ಮಣ್ಣ ಅಭಿನಂದಿಸಿದರು. ಪ್ರಾಂಶುಪಾಲ ಆರ್.ರಮೇಶ್, ಸಂಯೋಜಕ ಕೆ.ಎಂ. ಶಿವಣ್ಣ, ಪ್ರಾಧ್ಯಾಪಕರಾದ ರಘು, ವಿನಯ್‌ಕುಮಾರ್, ಶ್ರೀನಿವಾಸಮೂರ್ತಿ, ಶೋಭಾ, ಶಿಲ್ಪಶ್ರೀ, ಗ್ರಂಥಪಾಲಕ ರಂಗನಾಥ್, ಡಿ.ಎ.ಕೆರೆ ಚಿಕ್ಕಹುಚ್ಚೇಗೌಡ, ಮಣಿಗೆರೆ ರಾಮಕೃಷ್ಣ ಹಲವರಿದ್ದರು.