ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐ ವಹಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಗಂಭೀರವಾಗಿದೆ. ಅನೇಕ ಪ್ರಭಾವಿಗಳ ಹೆಸರು ಸಹ ಕೇಳಿ ಬರುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಿಬಿಐಗೆ ಈ ಪ್ರಕರಣವನ್ನು ವಹಿಸಬೇಕು ಎಂದು ಹೇಳಿದರು.
ನಾನು ಕೂಡ ಇದರ ಬಗ್ಗೆ ಧ್ವನಿಯೆತ್ತುವೆ. ಮುಡಾ ಇರುವುದು ಸಾರ್ವಜನಿಕರ ಒಳಿತಿಗಾಗಿ. ನಿವೇಶನ ವಂಚಿತ ಜನರಿಗೆ ನಿವೇಶನ ನೀಡಲು. ಆದರೆ, ಈ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ನಾನು ಮುಡಾ ಸಭೆಯಲ್ಲಿ ಭಾಗಿಯಾದಾಗ ಇದರ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.