ಚಿತ್ರದುರ್ಗ: ನಗರದ ಮಠದಹಟ್ಟಿಯ ಮತಗಟ್ಟೆಯಲ್ಲಿ ಶುಕ್ರವಾರ ಮಠಾಧೀಶರಾದ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀ, ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಶಾಂತವೀರ ಶ್ರೀ, ಸೇವಾಲಾಲ್ ಶ್ರೀ, ಕೇತೇಶ್ವರ ಶ್ರೀ, ಕೃಷ್ಣಯಾದವಾನಂದ ಶ್ರೀ, ಕಬೀರಾನಂದ ಬಡಾವಣೆಯ ಮತಗಟ್ಟೆ ಸಂಖ್ಯೆ 109ರಲ್ಲಿ ಶಿವಲಿಂಗಾನಂದ ಶ್ರೀ ಮತ ಚಲಾಯಿಸಿದ ನಂತರ ಶಾಹಿ ತೋರಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾನ ಅಂಗವಾಗಿ ಶುಕ್ರವಾರ ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಪೂಜೆ ಸಲ್ಲಿಸಿದರು. ಪಕ್ಷದ ಪದಾಧಿಕಾರಿಗಳಾದ ಟಿ.ಜಿ.ನರೇಂದ್ರನಾಥ್, ನಾಗರಾಜ್ ಬೇದ್ರೆ, ಶಂಭು ಇತರರಿದ್ದರು.
ಮಾಜಿ ಸಂಸದ ಜನಾರ್ದನ ಸ್ವಾಮಿ ಅವರು ಚಿತ್ರದುರ್ಗ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ಜೊತೆ ಮತದಾನ ಮಾಡಿದ ನಂತರ ಶಾಹಿ ತೋರಿಸಿದರು. ಲೋಕಸಭಾ ಚುನಾವಣೆ ಅಂಗವಾಗಿ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಪಟ್ಟದ ಪರಮೇಶ್ವರಿ ಶಾಲೆಯಲ್ಲಿ ಶುಕ್ರವಾರ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮತ ಚಲಾಯಿಸಿದರು.
ಹೊಸದುರ್ಗ ತಾಲೂಕು ದೇವಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಖಿ ಮತಗಟ್ಟೆ 38ರಲ್ಲಿ ಎಂಎಲ್ಸಿ ಕೆ.ಎಸ್.ನವೀನ್ ಶುಕ್ರವಾರ ಮತದಾನ ಮಾಡಿದರು. ಚಿತ್ರದುರ್ಗದ ಎಪಿಎಂಸಿ ಆವರಣದ ಮತಗಟ್ಟೆಯಲ್ಲಿ ಶುಕ್ರವಾರ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪುತ್ರ ಡಾ.ಸಿದ್ಧಾರ್ಥ ಗುಂಡಾರ್ಪಿ ಮತ ಚಲಾಯಿಸಿದ ನಂತರ ಶಾಹಿ ತೋರಿಸಿದರು.
ಚಿತ್ರದುರ್ಗದ ಬಿವಿಕೆಎಸ್ ಬಡಾವಣೆಯಲ್ಲಿನ ಬರಗೇರಮ್ಮ ಶಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕುಟುಂಬ ಸಮೇತ ಶುಕ್ರವಾರ ಮತದಾನ ಮಾಡಿದ ನಂತರ ಶಾಹಿ ತೋರಿಸಿದರು. ಹೊಳಲ್ಕೆರೆಯ ತರಳಬಾಳು ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 172ರಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮತ ಚಲಾಯಿಸಿದ ನಂತರ ಶಾಹಿ ತೋರಿಸಿದರು.