ದೋರನಹಳ್ಳಿ ಗ್ರಾಮದ ಶ್ರೀ ಮಹಾಂತೇಶ್ವರ ಮಠಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಭೇಟಿ ನೀಡಿ ನೂತನ ಶ್ರೀಗಳಾದ ಶ್ರೀ ಮಡಿವಾಳ ದೇವರಿಂದ ಆಶೀರ್ವಾದ ಪಡೆದರು. ಯುಡಾ ಅಧ್ಯP್ಷÀ ವಿನಾಯಕ ಮಾಲಿ ಪಾಟೀಲï, ಮಾಜಿ ಗ್ರಾಪಂ ಅಧ್ಯP್ಷÀ ಆರೀಫ್ ಮಠ, ಮರೆಪ್ಪ ಬಿಳ್ಹಾರ್, ಅಂಬರೀಶ ಜಾಕಾ, ಶರಣಗೌಡ ಮಾಲಿ ಪಾಟೀಲï, ಸಿದ್ದಲಿಂಗಯ್ಯ ಸ್ವಾಮಿ, ಪರಶುರಾಮ ಇತರರಿದ್ದರು. 
ಜಿಲ್ಲೆ

ಮಠದ ಅಭಿವೃದ್ಧಿಗೆ ಶ್ರಮಿಸುವೆ

ದೋರನಹಳ್ಳಿ: ಸಮಾಜಕ್ಕೆ ಮಠಗಳು ಮಾದರಿಯಾಗಿದ್ದು, ಗುರುವಿಲ್ಲದ ಮಠ, ಹಿರಿಯರಿಲ್ಲದ ಮನೆ ಎಂದರೆ ಬೆಕ್ಕಿಲ್ಲದ ಮನೆಯಲ್ಲಿ ಇಲಿ ಹಾರಾಡಿದಂತೆ. ಹೀಗಾಗಿ ನೂತನ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ಗ್ರಾಮದ ಮಹಾಂತೇಶ್ವರ ಹಿರೇಮಠಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಮಠಗಳು ಸಮಾಜ ಕಾಪಾಡುವ ಕೇಂದ್ರಗಳು. ಅವುಗಳನ್ನು ಕಾಪಾಡುವ ಹೊಣೆ ಸಮಾಜz್ದÁಗಿರುತ್ತದೆ. ಮಠ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಹಿರೇಮಠದ ಪೂಜ್ಯರ ಅಗಲಿಕೆಯಿಂದ ಗ್ರಾಮಕ್ಕೆ, ಮಠಕ್ಕೆ, ಭಕ್ತರಿಗೆ ತುಂಬಲಾರದ ನಷ್ಟವಾದೆ. ಆದರೆ ಈಗ ನೂತನ ಶ್ರೀಗಳ ಆಗಮನದಿಂದ ಮಠದ ಮುಂದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ ಅನುಕೂಲವಾಗಲಿದ್ದು, ಶ್ರೀ ಮಠದ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ವೇಳೆ ನೂತನ ಶ್ರೀಗಳಿಗೆ ಸತ್ಕರಿಸಿ ಆಶೀರ್ವಾದ ಪಡೆದರು.

ಹಳ್ಳೆಪ್ಪ ಹುಡೇದ್, ಮಲ್ಲಣ್ಣ ಸುರಪುರ, ಸಲೀಂ ಮಠ, ತಿಪ್ಪಣ್ಣ ಸಾಹುಕಾರ್, ಪರಮಣ್ಣ ಆಂದೇಲಿ, ಷಣ್ಮುಖಪ್ಪ ಕಕ್ಕೇರಿ, ಭಾಗಣ್ಣ ಹೋತಪೇಟ, ತಾಯಮ್ಮ ಶಹಾಪುರ, ಅಬ್ದುಲï ಬಾಷಾ ಅರ್ಜುಣಗಿ, ಚಿನ್ನಪ್ಪ ನೀಲಂಕಾರ, ವಿಜಯ ಮಲಗೊಂಡ, ಅಬ್ದುಲï ಗುತ್ತೇದಾರ್, ಯಲ್ಲಪ್ಪ ಹುಡೇದ್, ಶಿವು ಸುರಪುರ, ಬಸವರಾಜ ಮಲಗೊಂಡ, ಹಣಮಂತ ಶಹಾಪುರ ಇತರರಿದ್ದರು.