ಕೊಲ್ಹಾರ: ತಾಲೂಕಿನ ಮಟ್ಯಾಳ ಕ್ರಾಸ್‌ನಲ್ಲಿ ಪ್ರಾರಂಭಿಸುತ್ತಿರುವ ಮದ್ಯದ ಅಂಗಡಿಯನ್ನು ರದ್ದು ಮಾಡಲು ತಹಸೀಲ್ದಾರ್ ಅವರು ಕೂಡಲೇ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮಟ್ಯಾಳ ಕ್ರಾಸ್‌ನಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ಪ್ರಾರಂಭ ಮಾಡಲು ಬಿಡಬಾರದು. ಇಲ್ಲಿನ ಶಾಲಾ ಮಕ್ಕಳು, ರೈತರು ಸೇರಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಒಂದು ವೇಳೆ ಮದ್ಯದ ಅಂಗಡಿಗೆ ಪರವಾನಗಿ ನೀಡಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.
ಗ್ರಾಮ ಲೆಕ್ಕಾಧಿಕಾರಿ ಆನಂದ ಇಂಡಿ ಮನವಿ ಸ್ವೀಕರಿಸಿದರು. ನಿಂಗಪ್ಪ ಗಣಿ, ರಾಜು ಚಲವಾದಿ, ಮುದಕಣ್ಣ ಚಲವಾದಿ, ಹಣಮಂತ ಪೂಜಾರಿ, ಸತೀಶ ಕುಳ್ಳೊಳಿ, ಬೋರಮ್ಮ ಕುದುರಿ, ಬಾಳವ್ವ ಕೌಲಗಿ ಇತರರಿದ್ದರು.