ಜಿಲ್ಲೆ

ಮಟ್ಟಿ ಬಸವೇಶ್ವರ ಜಾತ್ರೆ ಸೆ.1, 2ಕ್ಕೆ

ಚಿತ್ರದುರ್ಗ: ತಾಲೂಕಿನ ಕ್ಯಾದಿಗೆರೆ ಗ್ರಾಮದ ಮಟ್ಟಿ ಬಸವೇಶ್ವರ ಸ್ವಾಮಿಯ ಶ್ರಾವಣ ಮಾಸದ ಜಾತ್ರಾ ಮಹೋತ್ಸವವು ಸೆ. 1, 2ರಂದು ದೇಗುಲದಲ್ಲಿ ಹಮ್ಮಿಕೊಳ್ಳಲಾಗಿದೆ.

1ರಂದು ಮಧ್ಯಾಹ್ನ 12ರಿಂದ ಗ್ರಾಮದ ಆಂಜನೇಯಸ್ವಾಮಿ, ಮಟ್ಟಿ ಬಸವೇಶ್ವರ ಸ್ವಾಮಿ ಮೆರವಣಿಗೆ ನಡೆಯಲಿದ್ದು, ವೀರಗಾಸೆ ಮತ್ತು ಕರಡಿ ಚಮಾಳ ಸೇರಿ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ರಾತ್ರಿ 9.30ರಿಂದ ಮಟ್ಟಿ ಬಸವೇಶ್ವರ ಭಜನಾ ಮಂಡಳಿಯಿಂದ ಭಜನೆ ಏರ್ಪಡಿಸಲಾಗಿದೆ.

2ರಂದು ಬ್ರಾಹ್ಮೀ ಮುಹೂರ್ತದಲ್ಲಿ ಮಟ್ಟಿ ಬಸವೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ, ಬೆಳಗ್ಗೆ 6.30ರಿಂದ ಕುಂಭಾಭಿಷೇಕ, ನಂತರ ಅಲಂಕಾರ ಸೇವೆ ನೆರವೇರಲಿದೆ. 11.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಡಿ.ಎಸ್.ಹಳ್ಳಿ ಮತ್ತು ಇಂಗಳದಾಳು ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ-90, ದ್ವಿತೀಯ ಪಿಯುಸಿಯಲ್ಲಿ ಶೇ 80ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.