ಪಾವಗಡ : ಮಟ್ಕಾ ದಂಧೆಗೆ ತಾಲೂಕಿನ ಬಡಜನರು ಹೈರಾಣಾಗಿರುವ ನಡುವೆಯೇ ಇತ್ತೀಚೆಗೆ ಗ್ರಾಮಗಳಲ್ಲಿ ಬಹಿರಂಗವಾಗಿ ನಡೆಯುತ್ತಿರುವ ಇಸ್ಪೀಟ್ ಆಟ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ದೊಡ್ಡಹಳ್ಳಿ, ವೈ.ಎನ್.ಹೊಸಕೋಟೆ, ಅರಸೀಕೆರೆ, ಪಾವಗಡ ಪಟ್ಟಣ, ರಾಜವಂತಿ, ಚಿಕ್ಕನಾಯಕನಹಳ್ಳಿ, ಕಿಲಾರ್ಹಳ್ಳಿ, ಲಿಂಗದಹಳ್ಳಿ ಮತ್ತಿತರರ ಗ್ರಾಮಗಳಲ್ಲಿ ಎಗ್ಗ್ಲಿದೆ ನಡೆಯುತ್ತಿದ್ದು, ಕಡಿವಾಣ ಹಾಕಬೇಕಾದ ಪೊಲೀಸರ ಜಾಣಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಕಷ್ಟು ಜನ ಕೂಲಿ ಮಾಡಿ ದುಡಿದ ಹಣವನ್ನೆಲ್ಲಾ ಇಸ್ಪೀಟ್‌ನಲ್ಲಿ ಸೋತು ಮನೆಗೆ ತೆರಳುತ್ತಿದ್ದು ಮಹಿಳೆಯರು, ಮಕ್ಕಳು ಮನೆಗಳಲ್ಲಿ ಜಗಳವಾಡುತ್ತಿದ್ದಾರೆ. ಪ್ರತಿನಿತ್ಯವೂ ಇಸ್ಪೀಟ್ ಆಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಡ ಕುಟುಂಬಗಳೇ ಹೆಚ್ಚಾಗಿರುವ ಪಾವಗಡ ತಾಲೂಕಿನಲ್ಲಿ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳೂ ಕೂಡ ತೋಟದ ಸಾಲು, ಅರಣ್ಯ ಪ್ರದೇಶದಲ್ಲಿ ಜೂಜಾಟಕ್ಕೆ ಶುರುವಿಟ್ಟುಕೊಂಡಿದ್ದಾರೆ.
ಪ್ರತಿದಿನವೂ ಬಹಿರಂಗವಾಗಿ ನಡೆಯುವ ದಂಧೆಗೆ ಕಮಿಷನ್ ಪಡೆದು ಆಟವಾಡಲು ಪೊಲೀಸರೇ ಬಿಡುತ್ತಾರೆ ಎಂಬ ದೂರುಗಳಿವೆ. ಜೂಜಾಡುವ ೆಟೋ, ವಿಡಿಯೋಗಳನ್ನು ಸಾಕ್ಷಿಯಾಗಿ ನೀಡಿದರೂ ಕ್ರಮಕೈಗೊಳ್ಳದಿರುವ ಪೊಲೀಸರ ಬಗ್ಗೆ ಸಂಶಯಗಳು ಮೂಡುತ್ತಿವೆ.
ಬೀದಿಗೆ ಬಿದ್ದ ಬಡಕುಟುಂಬ ; ಇಸ್ಪೀಟ್, ಮಟ್ಕಾ ದಂಧೆ ವ್ಯಾಪಕವಾಗಿ ತಾಲೂಕಿನಾದ್ಯಂತ ಹರಡಿದ್ದು, ನೂರಾರು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಹಣ ಮಾಡುವ ಚಟಕ್ಕೆ ಬಿದ್ದು ಮನೆ, ಆಸ್ತಿಗಳನ್ನು ಕಳೆದುಕೊಂಡವರೂ ಇದ್ದಾರೆ. ದುಶ್ಚಟಗಳಿಗೆ ದಾಸರಾಗಿ ಸಂಸಾರಗಳು ಹಾಳಾಗುತ್ತಿರುವುದು ಮನೆಯಲ್ಲಿರುವ ಮಹಿಳೆಯರು, ಮಕ್ಕಳ ನೆಮ್ಮದಿ ಕೆಡಿಸಿದೆ. ಎ್ಲ ಗೊತ್ತಿದ್ದೂ ಮೌನವಾಗಿರುವ ಪೊಲೀಸ್ ಇಲಾಖೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಪಾವಗಡ ತಾಲೂಕಿನಾದ್ಯಂತ ಜೂಜಾಡುತ್ತಿರುವ ಬಗ್ಗೆ ದೂರುಗಳು ನಿರಂತರವಾಗಿ ಬರುತ್ತಿವೆ, ನಾವು ದಾಳಿ ಮಾಡುವ ಸಮಯಕ್ಕೆ ಸ್ಥಳ ಬದಲಾವಣೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಜೂಜು ನಡೆಯುವ ಸಮಯದಲ್ಲಿ ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಲು ಮನವಿ ಮಾಡುತ್ತೇವೆ. ಕೆ.ಜಿ.ರಾಮಕೃಷ್ಣ ಡಿವೈಎಸ್‌ಪಿ, ಮಧುಗಿರಿ