ಜಿಲ್ಲೆ

ಮಟಕಾ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ

ಮಟಕಾ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ

ಬೆಳಗಾವಿ: ನಗರದ ಕಣಬರ್ಗಿ ಸೆಂಚೂರಿಯನ್ ಕ್ಲಬ್ ಬಳಿ ಮಟಕಾ ಆಟದಲ್ಲಿ ತೋಡಗಿದ್ದ ಓರ್ವನನ್ನು ಪೊಲೀಸ್‌ ರು ಶನಿವಾರ ಬಂಧಿಸಿದ್ದಾರೆ.

ಕಣಬರ್ಗಿ ನಿವಾಸಿ ನಾಗರಾಜ ಯಲ್ಲಪ್ಪ ತಲ್ಲೂರ( 45) ಬಂಧಿತ ಆರೋಪಿ. ಈತ ಮಟಕಾ ಆಟದಲ್ಲಿ ತೋಡಗಿದ್ದ ವೇಳೆ ಪೊಲೀಸ್‌ರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.ದಾಳಿ ವೇಳೆ 1,100ರೂ.ನಗದು ಹಣವನ್ನು ವಶ ಪಡಿಸಿಕೊಂಡಿದ್ದಾರೆ.ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.