ವಿಜಯಪುರ : ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಟಕದ ವತಿಯಿಂದ ಮಜ್ದೂರ್ ಕಾರ್ಡ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಉಚಿತ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಈ ಕಾರ್ಡ್ ಪಡೆದುಕೊಳ್ಳುವ ವಿಧಾನ, ಸೌಲಭ್ಯಗಳ ಕುರಿತು ಸಮಗ್ರವಾಗಿ ತಿಳಿವಳಿಕೆ ನೀಡಲಾಯಿತು. ಅಲ್ಲದೆ, ಶಿಬಿರದಲ್ಲಿ ಕಾರ್ಮಿಕರಿಗೆ ತಣದ ನೋಂದಣಿ, ದಾಖಲೆ ಪರಿಶೀಲನೆ ಮತ್ತು ಲೇಬರ್ ಕಾರ್ಡ್ ಪಡೆಯಲು ಮಾರ್ಗದರ್ಶನ ನೀಡಲಾಯಿತು.
ಕಾಂಗ್ರೆಸ್ ಅಲ್ಪಸಂಖ್ಯಾತ ಟಕದ ಜಿಲ್ಲಾಧ್ಯ ಶಕೀಲ್ ಬಾಗಮಾರೆ ಮಾತನಾಡಿ, ಕಾರ್ಮಿಕರು ಈ ದೇಶದ ಉಸಿರು. ಕಾರ್ಮಿಕರೇ ಈ ದೇಶದ ಶಕ್ತಿ.
ಕಾರ್ಮಿಕರ ಕಲ್ಯಾಣವನ್ನು ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖ್ಯ ಧ್ಯೇಯವಾಗಿಸಿಕೊಂಡಿದ್ದರು ಎಂದ ಅವರು, ಕಾರ್ಮಿಕರಿಗಾಗಿ ಹಲವು ಸೌಲಭ್ಯಗಳಿವೆ, ಆದರೆ ಸೌಲಭ್ಯಗಳ ಬಗ್ಗೆ ಅರಿವಿನ ಸಕೊರತೆಯಿಂದ ಕಾರ್ಮಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ತಿಳಿಸಿದರು.
ದಿನನಿತ್ಯ ತೊಂದರೆ ಅನುಭವಿಸುವ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಮಿಕರು ತಮ್ಮ ಮಜದೂರ್ ಕಾರ್ಡ್ ಪಡೆಯುವ ಹತೆಗೆ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕೆಂದು ಸಲಹೆ ನೀಡಿದರು.
ವಿಜಯಪುರದಲ್ಲಿ ಮಜ್ದೂರ್ ಕಾರ್ಡ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಿತು.