ಸೋಮವಾರಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಾಣಂತಿಯರಿಗೆ ಹೊದಿಕೆ ವಿತರಿಸಲಾಯಿತು. ಸಂಧ್ಯಾ, ಶಾಂತಾ, ತನ್ಮಯಿ, ಸುವಿನಾ, ಚಿತ್ರ, ಲತಾ, ಸತೀಶ್ ಕುಮಾರ್ ಇದ್ದರು.  
ಜಿಲ್ಲೆ

ಮಗುವಿನ ಬೆಳವಣಿಗೆಗೆ ತಾಯಿ ಹಾಲು ತಳಪಾಯ

ಸೋಮವಾರಪೇಟೆ: ಮಗು ಹುಟ್ಟಿದ ತಕ್ಷಣದಿಂದಲೇ ತಾಯಿ ಹಾಲು ಕುಡಿಸಬೇಕು. ಸ್ತನ್ಯಪಾನ ಅಮೃತಕ್ಕೆ ಸಮಾನವಾಗಿದ್ದು, ಮಗುವಿನ ಬೆಳವಣಿಗೆಗೆ ತಳಪಾಯ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವ ಸ್ತನ್ಯಪಾನ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಾಣಂತಿಯರಿಗೆ ಹೊದಿಕೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.

ಮಗುವಿನ ಆರೋಗ್ಯ ಕಾಪಾಡುವಲ್ಲಿ ಸ್ತನ್ಯಪಾನ ಮಹತ್ವದ ಪಾತ್ರ ವಹಿಸುತ್ತದೆ. ಬಾಣಂತಿಯರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಪೌಷ್ಟಕಾಂಶಯುಕ್ತ ಆಹಾರವನ್ನು ಸೇವಿಸುವುದರ ಜತೆಗೆ ಆರೋಗ್ಯ ಇಲಾಖೆಯಿಂದ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು ಎಂದು ಶಸ್ತ್ರ ಚಿಕಿತ್ಸಕ ಡಾ. ಸತೀಶ್‌ಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ, ಕಾರ್ಯದರ್ಶಿ ತನ್ಮಯಿ ಪ್ರವೀಣ್, ಎಡಿಟರ್ ಸುವಿನ ಕೃಪಾಲ್ ಪದಾಧಿಕಾರಿಗಳಾದ ಚಿತ್ರಾ ಬೋಜರಾಜು, ಲತಾ ನಾಗೇಶ್, ನಂದಿನಿ ಗೋಪಾಲ್, ಅನಿತಾ ಶುಭಾಕರ್, ಹಿರಿಯ ಶುಷ್ರೂಷಕಿ ಅನಿತಾ ಇತರರು ಇದ್ದರು.