ಬಸವಕಲ್ಯಾಣ: ಕೂಸಿನ ಮನೆ ಮಕ್ಕಳ ಲಾಲನೆ-ಪಾಲನೆಗಾಗಿ ತರಬೇತಿ ಪಡೆದುಕೊಳ್ಳುತ್ತಿರುವ ಮಕ್ಕಳ ಆರೈಕೆದಾರರ (ಕೇರ್ ಟೇಕರ್ಸ್) ಪಾತ್ರ ಮಹತ್ವದ್ದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕೂಸಿನ ಮನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ತರಬೇತಿ ಏಳು ದಿನದ ತರಬೇತಿಯಲ್ಲಿ ಕಲಿಸುವ ಪ್ರತಿ ವಿಷಯಗಳು ಮಹತ್ವದಾಗಿದೆ. ಆದ್ದರಿಂದ ಶಿಬಿರಾರರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ರಾಜಶೇಖರ ನೆಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ ಕೂಸಿನ ಮನೆ ಪ್ರಾರಂಭಿಸಲಾಗಿದೆ ಎಂದರು.
ಹಿರಿಯ ಮೇಲ್ವಿಚಾರಕಿ ದೈವಿಕಾ ಮಾತನಾಡಿ, ಪಾಲಕರು ಕೂಸಿನ ಮನೆಯಲ್ಲಿ ಮಗುವನ್ನು ಬಿಟ್ಟು ಹೋದಾಗ ಯಾವ ರೀತಿ ಬೆಳೆಸಬೇಕು ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ವಿಷಯ ನಿರ್ವಾಹಕ ರಾಜಕುಮಾರ ಖಂಡ್ರೆ, ಐಇಸಿ ಸಂಯೋಜಕ ವೀರಾರೆಡ್ಡಿ, ರಾಮಲಿಂಗಯ್ಯ ಸ್ವಾಮಿ, ಮೇಲ್ವಿಚಾರಕಿ ಕೌಸರಬಾನು, ಡಿಟಿಸಿ ಸಂಜೀವಕುಮಾರ ಇತರರಿದ್ದರು.