ಹೊಸಪೇಟೆ: ಟೆಂಟ್‌ನಲ್ಲಿ ರಾತ್ರಿ ವೇಳೆ ಮಲಗಿದ್ದಾಗ ಮಗುವನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿ ಹರಪನಹಳ್ಳಿ ಪಟ್ಟಣ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿದೆ.
ಡಿ.16 ರ ರಾತ್ರಿ ಹರಪನಹಳ್ಳಿ ಪಟ್ಟಣದ ಯಮಹ ಷೋರೂಂ ಬಳಿ ಟೆಂಟ್‌ನಿAದ ಆರ್ಯನ್(1) ಎಂಬ ಮಗುವನ್ನು ಅಪಹರಿಸಿದ್ದಾರೆ ಎಂದು ಮಗುವಿನ ತಂದೆ ಯುವರಾಜ್ ಸಖರ್‌ಂ ಪವರ್ ದೂರು ನೀಡಿದ್ದಾರೆ. ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣಾವಾದ ಮೈಕಟ್ಟು ಹೊಂದಿದ್ದು, 2 ಅಡಿ ಎತ್ತರ ಇದ್ದು, ತೊದಲು ಮಾತನಾಡುತ್ತಾನೆ. ಸಾರ್ವಜನಿಕರ ಗಮನಕ್ಕೆ ಕಂಡುಬAದಲ್ಲಿ ವಿಜಯನಗರ ಕಂಟ್ರೋಲ್‌ರೂA 9480805700, ಪೊಲೀಸ್ ಅಧೀಕ್ಷಕರು 9480805701, ಹರಪನಹಳ್ಳಿ ಉಪಾದೀಕ್ಷಕ 9480805722, ವೃತ್ತ ನಿರೀಕ್ಷಕರು 9480805736, ಹರಪನಹಳ್ಳಿ ಪೊಲೀಸ್ ಠಾಣೆ 9480805776 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಲಾಗಿದೆ.