ಜಿಲ್ಲೆ

ಮಗಳಿಂದ ಹಣ ಕೊಡಿಸುವಂತೆ ದೂರು

ಕಲಬುರಗಿ: ಮನೆಯಲ್ಲಿನ ೮೯ ಗ್ರಾಂ ಬಂಗಾರ ಹಾಗೂ ೪ ಲಕ್ಷ ರೂ. ನಗದು ತೆಗೆದುಕೊಂಡು ಹೋಗಿ ಪ್ರಿಯಕನ ಜತೆ ಮದುವೆಯಾದ ಮಗಳಿಂದ ಬಂಗಾರ ಮತ್ತು ಹಣ ವಾಪಸ ಕೊಡಿಸುವಂತೆ ತಾಯಿ ದೂರು ನೀಡಿದ ಟನೆ ನಡೆದಿದೆ. ಶಿಕ್ಷಕಿ ಖೈರುನಿಸಾ ಬೇಗಂ ಹಾಗೂ ಅವರ ಪತಿ ರ‍್ಕಾರಿ ಕೆಲಸದಲ್ಲಿದ್ದಾರೆ. ಅವರ ಪುತ್ರಿ ಲಕನಾಜ್​ ಮೇ ೨೪ರಂದು ಮನೆಯಲ್ಲಿ ಯಾರಿಗೂ ಹೇಳದೆ, ೮೯ ಗ್ರಾಂ ಬಂಗಾರ ಹಾಗೂ ೪ ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದರು. ನಂತರ ಪ್ರಿಯಕರ ಮುಸ್ತಾಕ್​ ಅಹ್ಮದ್​ ಎಂಬಾತನ ಜತೆ ಮದುವೆ ಆಗಿದ್ದಖಯ, ಇದೀಗ ಅವರಿಂದ ಮನೆಯಿಂದ ತೆಗೆದುಕೊಂಡು ಹೋದ ಒಡವೆ ಮತ್ತು ಹಣ ವಾಪಸ್​ ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ರೋಜಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.