ನಾಪೋಕ್ಲು: ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ದೇವಾಲಯದಲ್ಲಿ ನಾಡಿನ ಸುಭಿಕ್ಷೆಗಾಗಿ ಏಕಾದಶ ರುದ್ರ ವಿಶೇಷ ಪೂಜೆ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ತೀರ್ಥ, ಪ್ರಸಾದ ವಿತರಣೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯದ ಮುಖ್ಯ ಅರ್ಚಕ ದಿವಾಕರ, ಅರ್ಚಕರಾದ ಗುತ್ತಿಗಾರಿನ ಶಿವಸುಬ್ರಹ್ಮಣ್ಯ ಜೋಯಿಸ್, ಪೈಚಾರಿನ ಸುಬ್ರಮಣ್ಯ ಭಟ್, ಕಲ್ಮಡ್ಕದ ಅರುಣ್ ಶಂಕರ್ ಭಟ್ ಏಕಾದಶ ರುದ್ರ ಪೂಜೆ ನೆರವೇರಿಸಿದರು. ದೇವಾಲಯದ ತಕ್ಕ ಮುಖ್ಯಸ್ಥರು, ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಇದ್ದರು.