ಸುರಪುರ : ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಕಿವಿಮಾತು ಹೇಳಿದರು.
ನಗರದಲ್ಲಿ ಹೊಸದಾಗಿ ನಿರ್ಮಿಸಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯವನ್ನು ಶನಿವಾರ ಉದ್ಘಾಟಿಸಿದ ಅವರು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗವನ್ನು ಮೇಲೆತ್ತಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಸರ್ಕಾರ ನೀಡುವ ಸೌಲಭ್ಯ ಪಡೆದು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದರು.
ಬಿಸಿಎA ಸಹಾಯಕ ನಿರ್ದೇಶಕ ತಿಪ್ಪಾರಡ್ಡಿ ಮಾಲಿಪಾಟೀಲ್, ಸುರಪುರದಲ್ಲಿ ಬಾಲಕಿಯರ ವಸತಿನಿಲಯ ನಿರ್ಮಿಸಿದಂತೆ ಹುಣಸಗಿಯಲ್ಲೂ ನಿರ್ಮಾಣ ಆಗಬೇಕಾಗಿದೆ. ಆದರೀಗ ನೀಡಿರುವ ಸ್ಥಳ ಬಹಳ ವಿದ್ಯಾರ್ಥಿಗಳಿಗೆ ದೂರವಾಗುವುದರಿಂದ ಕೈ ಬಿಟ್ಟು ಕೆಬಿಜೆಎನ್‌ಎಲ್ ಸ್ಥಳ ಸೂಕ್ತವಾಗಿದೆ. ಶಾಸಕರು ಕೂಡ ಕೆಬಿಜೆಎನ್‌ಎಲ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದರು.
ಜಿಪA ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಯಾದಗಿರಿ ಭೂ ಸೇನಾ ನಿಗಮದ ಎಇಇ ಧನಂಜಯ, ಪಿ.ಡಿ.ಕಿರಣಕುಮಾರ, ನಗರಸಭೆ ಸದಸ್ಯರಾದ ಅಹ್ಮದ್ ಶರೀಫ್, ಸುವರ್ಣ ಎಲಿಗಾರ, ಲಕ್ಷಿö್ಮÃ ಬಿಲ್ಲವ, ಪ್ರಥಮದರ್ಜೆ ಗುತ್ತಿಗೆದಾರ ಯಂಕೋಬ ಸಾಹುಕಾರ, ಶಾಸಕರ ಆಪ್ತ ಸಹಾಯಕ ಹನುಮಂತ ಮಕಾಶಿ ಇದ್ದರು.