ಮುರಗೋಡ: ಮಕ್ಕಳು ಆಟೋಟಗಳಲ್ಲಿ ತೊಡಗಿಸಿಕೊಂಡರೆ ಮನೋದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸ್ಥಳಿಯ ಹೊರಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುರಗೋಡ ವಲಯಮಟ್ಟದ ಪ್ರಾಥಮಿಕ
ಶಾಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಮಕ್ಕಳಿಗೆ ಕ್ರೀಡಾಸ್ಫೂರ್ತಿ ತುಂಬುವ ಅವಶ್ಯಕತೆಯಿದೆ. ಮಕ್ಕಳು ಕಲಿಕೆ ಜತೆಗೆ ಆಟಗಳಲ್ಲಿ ಪಾಲ್ಗೊಳ್ಳಬೇಕು ಎಂದರು.ೇ ತ್ರ ಸಮನ್ವಯಾಧಿಕಾರಿ ಬಸವರಾಜ ಬ್ಯಾಳಿ ಮಾತನಾಡಿ, ಆಟದಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಸ್ಪರ್ಧೆ ಮಾಡುವುದು ಮುಖ್ಯ ಎಂದರು.
ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ ಅಧ್ಯತೆ ವಹಿಸಿದ್ದರು. ಶಿಕರ ಸಂದ ಜಿಲ್ಲಾ ಉಪಾಧ್ಯ ಮಲ್ಲಿಕಾರ್ಜುನ ಸಿದ್ದನಗೌಡರ, ಎಂ.ಎಸ್.ಕೋಳಿ, ಉಪಾಧ್ಯೆ ಮಹಾದೇವಿ ಮಬನೂರ, ಪಿಡಿಒ ಆರ್.ಎಲ್. ಬಾಗಿಲದ, ಮುಖ್ಯಶಿಕ ಶ್ರೀಕಾಂತ ಪಟಾತರ, ವಿ.ಎ್.ಮರಿತಮ್ಮಣ್ಣವರ, ಸಿಆರ್ಸಿ ಎಸ್.ಎಸ್.ಮಲ್ಲಣ್ಣವರ, ಸಂಗಪ್ಪ ಬೆಳಗಾವಿ, ಎಪಿಎಂಸಿ ಸದಸ್ಯ ರಾಜು ಕಲಾಲ, ಗ್ರಾಪಂ ಸದಸ್ಯರಾದ ಶಿವು ಮಿಡಚಿ, ದೂಡ್ಡವ್ವ ಧರ್ಮಶಾಲಿ, ನೀಲಕಂಠ ಕರ್ಜಗಿ ಇತರರಿದ್ದರು.