ಹಾಸನ: ಚಿಕ್ಕ ವಯಸ್ಸಿನಲ್ಲಿಯೆ ಮೊಬೈಲ್‌ನ್ನು ಉಪಯೋಗಿಸುವುದು ತುಂಬಾ ಅಪಾಯಕಾರಿ. ಯಾವ ಮಕ್ಕಳು ಪುಸ್ತಕವನ್ನು ಹಿಡಿದು ಅದರ ಸ್ನೇಹವನ್ನು ಬೆಳೆಸುತ್ತಾರೆ ಅವರು ಜ್ಞಾನದಲ್ಲಿ ಹಾಗೂ ಸಮಾಜದಲ್ಲಿ ಬಹು ಎತ್ತರದ ಪದವಿಗಳನ್ನು ಪಡೆಯಬಹುದು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವಿಜಯ್ ಅಂಗಡಿ ತೀಳಿಸಿದರು
ನಗರದ ಹಾಸನಾಂಬೆ ದೇವಾಲಯ ಸಮೀಪವಿರುವ ಶ್ರೀ ಕ್ಷೇತ್ರ ಶ್ರೀ ಕಾಳಿಕಾ ಕರ್ಮಟೇಶ್ವರ ದೇವಾಲಯದಲ್ಲಿ ನವರಾತ್ರಿಯ ಸರಸ್ವತಿ ಪೂಜೆಯ ಪ್ರಯುಕ್ತ ಗುರುವಾರ ಮೇಧ ಸರಸ್ವತಿ ಹೋಮ ನೆರವೇರಿ ಸಂಜೆ ಮಕ್ಕಳಿಂದ ಸಾಮೂಹಿಕವಾಗಿ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಪುಸ್ತಕ ಬಹುಮುಖ್ಯ ಅವರು ಮೊಬೈಲ್‌ನ್ನು ತ್ಯಜಿಸಿ ಪುಸ್ತಕವನ್ನು ಹಿಡಿಯಬೇಕು. ಮಕ್ಕಳು ಮೊಬೈಲ್‌ನ್ನು ಹಿಡಿಯುವುದರಿಂದ ಪುಸ್ತಕದಿಂದ ದೂರವಾಗಿ ಜ್ಞಾನದಿಂದ ವಂಚುತರಾಗುತ್ತಿದ್ದಾರೆ ಎಂದರು.
ಲೇಖಕ ಪ್ರದೀಪ್ ಶರ್ಮಾ ಮಾತನಾಡಿ, ರಾಜನಾದವನು ಸ್ವಕ್ಷೇತ್ರದಲ್ಲಿ ಮಾತ್ರ ಗೌರವಕ್ಕೆ ಪಾತ್ರನಾದರೆ, ವಿದ್ಯಾವಂತನು ಎಲ್ಲಾ ಜಾಗದಲ್ಲಿಯೂ ಗೌರವವನ್ನು ಪಡೆಯುತ್ತಾನೆ. ಹಾಗಾಗಿ ಮಕ್ಕಳು ವಿದ್ಯಾವಂತರಾಗಬೇಕು. ಸಂಸ್ಕಾರಯುತ ಧಾರ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಆಗ ಮಾತ್ರ ಸದ್ಗುಣವಂತರಾಗಲು ಸಾಧ್ಯ. ಇಂದಿನ ಆಧುನಿಕ ವಿದ್ಯೆಯ ಜೊತೆಗೆ ನಮ್ಮ ಸನಾತನ ಸಾಂಪ್ರದಾಯಿಕ ವಿದ್ಯೆಯನ್ನು ಕೂಡ ಕಲಿಯುವುದು ಬಹು ಮುಖ್ಯ, ನಾವು ಎಲ್ಲದಕ್ಕೂ ಮೊದಲು ಸಂಸ್ಕಾರಯುತರಾಗಿ ಬದುಕುವುದನ್ನು ಕಲಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎಚ್.ಕೆ. ಆನಂದ್, ಎ. ಬ್ಯಾಟರಂಗಾಚಾರ್, ಎಚ್.ವಿ. ಹರೀಶ್, ಎಚ್‌ಎಸ್. ಆನಂದ್, ಎಂ.ಟಿ. ಸುರೇಶ್, ಎಚ್.ಕೆ. ಸತೀಶ್, ಅನಿಲ ಪದ್ಮನಾಭ, ಜಿ.ಆರ್. ತಿಮ್ಮಚಾರ್, ಎಸ್.ಆರ್. ಪ್ರಭಾಕರ್ ಮತ್ತು ಕಲ್ಲೇಶಾಚಾರ್ ಇತರರು ಉಪಸ್ಥಿತರಿದ್ದರು.