ಬೀದರ್: ಹಾಕಿ ಮಾಂತ್ರಿಕ ಧ್ಯಾನಚಂದ್ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನವನ್ನು ಬೀದರ್ ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆಯು ವಿವಿಧ ಕ್ರೀಡಾ ಚಟುವಟಿಕೆಗಳ ಆಯೋಜನೆಯೊಂದಿಗೆ ಆಚರಿಸಿತು.
ಓಟ, ಹಗ್ಗದಾಟ, ಕುರ್ಚಿ ಆಟ, ಎತ್ತರ ಜಿಗಿತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಹಾಗೂ ಪಾಲಕರು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾ ಪ್ರೇಮ ಮೆರೆದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕುದುರೆ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಶಂಭುಲಿಂಗ ಕುದುರೆ ಅವರು, ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕ್ರೀಡೆಗಳಿಗೆ ಚಾಲನೆ ನೀಡಿದರು.
ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಜೈಪ್ರಕಾಶ ಪವಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ಸಿರಾಜ್ ಪಟೇಲ್, ವಿ.ಎಂ. ರಾಂಪುರೆ ಶಾಲೆಯ ಸಂಸ್ಥಾಪಕಿ ಶಾರದಾಬಾಯಿ ರಾಂಪುರೆ, ಶಾಲೆಯ ಅಧ್ಯಕ್ಷ ಮಹೇಶ ಎಸ್.ರಾಂಪುರೆ, ಮುಖ್ಯಶಿಕ್ಷಕಿಯರಾದ ಶೈಲಜಾ ಗುಪ್ತಾ, ಅಂಬಿಕಾ ರಾಂಪುರೆ, ಶಿಕ್ಷಕಿಯರಾದ ನಿಕಿತಾ ಕುಂದೆ, ಪ್ರಿಯಾ ದೇವದುರ್ಗ, ನಂದಿನಿ ಭುರೇಶ, ಸುನೀತಾ, ಶ್ರುತಿ, ಪ್ರಿಯಂಕಾ, ಮೀನಾಕ್ಷಿ ಪಾಟೀಲ, ತ್ರಿವೇಣಿ ಜಮಗೆ, ಸಿಬ್ಬಂದಿ ದಿನೇಶ್ ಸೋನಿ, ಸಂಗೀತಾ ಬಲ್ಲೂರೆ, ಆಕಾಶ್, ರಾಹುಲ್, ಬುದ್ದಿಕ್ಷ ಇದ್ದರು.