ಜಿಲ್ಲೆ

ಮಕ್ಕಳು ಪರಿಶ್ರಮದಿಂದ ಓದಲಿ

ನಿಪ್ಪಾಣಿ: ಸಾಧಕ ವಿದ್ಯಾರ್ಥಿಗಳಿಗೆ ವಿಎಸ್‌ಎಂ ಶೈಕ್ಷಣಿಕ ಸಂಸ್ಥೆಯು ಉತ್ತಮ ವೇದಿಕೆಯಾಗಿದೆ. ಪರಿಶ್ರಮದಿಂದ ಓದುವ ಮೂಲಕ ಪಾಲಕರು ಮತ್ತು ಶಿಕ್ಷಕರ ಕೀರ್ತಿ ಹೆಚ್ಚಿಸಬೇಕು ಎಂದು ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಡ ಮಕ್ಕಳು ವಿದ್ಯೆ ಪಡೆಯುವುದರೊಂದಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಗ್ರ ನೂರರಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದರು.

ಮಂಡಲದ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಶಾಲೆಯ ಉಸ್ತುವಾರಿ ಸಮಿತಿ ಸದಸ್ಯ ಸಚಿನ ಹಾಲಪ್ಪನವರ, ಸಿಇಒ ಡಾ. ಸಿದ್ಧಗೌಡ ಪಾಟೀಲ ಮಾತನಾಡಿದರು. ವಿದ್ಯಾರ್ಥಿ ಸ್ನೇಹಾ ಹನಮಸಾಗರ ಮತ್ತು ಆಸೀಮ್ ದಾಡಿವಾಲೆ ಅಭಿಪ್ರಾಯ ಹಂಚಿಕೊಂಡರು. ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.

ಮಂಡಳದ ಸಂಚಾಲಕ ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ಪ್ರಾಚಾರ್ಯ ಚಿದಂಬರ ಜೋಶಿ, ಉಪಪ್ರಾಚಾರ್ಯ ವಿಜಯ ಮಗದುಮ್, ಪ್ರಾಚಾರ್ಯೆ ಡಾ. ಸಮೀರಾ ಬಾಗೇವಾಡಿ, ಶ್ರದ್ಧಾ ನಾರಾಯಣಕರ, ಗ್ರೇಸ್ ಪಾಟೀಲ, ಶಿಲ್ಪಾ ರೋಕಡೆ ಇತರರಿದ್ದರು.