ಸಂಕೇಶ್ವರದ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಉತ್ತರಾಯಣ-2022, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗಾಳಿಪಟ ಉತ್ಸವಕ್ಕೆ ಮೀನಾಕ್ಷಿ ಪಾಟೀಲ ಚಾಲನೆ ನೀಡಿದರು. ಡಾ. ಶೀತಲ ಭಿಡೆ. ಸಫಲಾ ರಾಮಗೌಡ, ಶೋಭಾ ಪಾಟೀಲ, ಉಶಾ ರವದಿ ಇತರರು ಇದ್ದರು. 
ಜಿಲ್ಲೆ

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

ಸಂಕೇಶ್ವರ: ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಪತ್ನಿ ಮೀನಾಕ್ಷಿ ಪಾಟೀಲ ಹೇಳಿದರು. ಪಟ್ಟಣದ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಸಿಬಿಎಸ್‌ಇ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಉತ್ತರಾಯಣ-2022, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರಗಳ ಕುರಿತು ತಿಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಉತ್ತರಾಯಣ-2022, ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಡಾ. ಶೀತಲ ಭಿಡೆ ಮಾತನಾಡಿ, ಮಕ್ಕಳು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಭಾಗವಹಿಸುವುದರಿಂದ ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಅತಿಥಿಗಳನ್ನು ಚಕ್ಕಡಿಯಲ್ಲಿ ಕರೆ ತರುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮ ಆಚರಿಸಿದರು. ದೇಶಿ ಉಡುಗೆ ತೊಟ್ಟ ವಿದ್ಯಾರ್ಥಿಗಳು ಕಣ್ಮನ ಸೆಳೆದರು. ನೃತ್ಯ, ಗಾಳಿಪಟ ಉತ್ಸವದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಸಫಲಾ, ನಾಗರತ್ನಾ, ರಾಮಗೌಡ, ಶೋಭಾ ಪಾಟೀಲ, ಉಶಾ ರವದಿ, ಗೌರಿ ಅಜ್ಜಣ್ಣವರ, ವಿಜೇತಾ ಪೆಡ್ನೇಕರ್, ಶೀತಲ ಮುಡಶಿ, ಭಾರತಿ ಪಾಟೀಲ, ಶೋಭಾ ಕೇಸ್ತಿ, ರೇಖಾ ಚಿಕ್ಕೋಡಿ, ಜಿ.ಎಸ್ ಕೊಟಗಿ, ಎಂ.ಎಸ್. ಕಾಮತ ಹಾಗೂ ಶಾಲಾ ಸಿಬ್ಬಂದಿ ಇದ್ದರು. ವಿ. ಖ. ನಾಗನೂರಿ ನಿರೂಪಿಸಿದರು. ಅನುಪಮಾ ಬಾಗಲಕೋಟ ವಂದಿಸಿದರು.