ಜಿಲ್ಲೆ

ಮಕ್ಕಳು ಕಲಿತು ಸ್ವಾವಲಂಬಿಗಳಾಗಬೇಕು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಗೋಕುಲ ರಸ್ತೆ ಮುರಾಜಿ ನಗರದಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಹಾಗೂ ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು.

ಕೃಷ್ಣ ಕುಲಕರ್ಣಿ ಉದ್ಘಾಟಿಸಿದರು. ದತ್ತಮೂರ್ತಿ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಹಿರಿಯ ಸದಸ್ಯರಾದ ವಿಠ್ಠಲ ಪರ್ವತಿಕರ, ವಿಶ್ವನಾಥ ಜೋಶಿ, ರಾಮಚಂದ್ರ ಕುರ್ತಕೋಟಿ, ಸದಾಶಿವರಾವ ಹರಪನಹಳ್ಳಿಯವರನ್ನು ಸನ್ಮಾನಿಸಲಾಯಿತು.

ನೀಟ್​ನಲ್ಲಿ ಹೆಚ್ಚು ಅಂಕ ಪಡೆದ ಚಿನ್ಮಯಿ ಯಾದಪ್ಪನವರ ಹಾಗೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಧನ ಸಹಾಯ ವಿತರಿಸಲಾಯಿತು.

ಅಧಕ್ಷತೆ ವಹಿಸಿದ್ದ ಡಾ. ಭಾಸ್ಕರ ಪಾಟೀಲ ಮಾತನಾಡಿ, ಮಕ್ಕಳು ಕಲಿತು ಸ್ವಾವಲಂಬಿಗಳಾಗಬೇಕು. ಜತೆಗೆ ಸಂಸ್ಕಾರವಂತರಾಗಿ ತಮ್ಮ ತನವನ್ನು ಉಳಿಸಿಕೊಂಡು ಬಾಳಬೇಕು. ಸಂಘದಿಂದ ಬೆಳೆಯುವುದರ ಜತೆ ಸಂಘವನ್ನು ಬೆಳೆಸಬೇಕೆಂದು ಕರೆ ನೀಡಿದರು.

ಶಂಕರ ಮಾಮುಲೆದೇಶಪಾಂಡೆ, ಆರ್. ಟಿ. ಜೋಗಳೇಕರ, ಜೆ.ಬಿ. ಜೋಶಿ, ಶ್ರೀಪಾದ ಗೋಸಾವಿ, ನರಸಿಂಹ ಕೊತವಾಲ, ವಿನಾಯಕ ಕುಲಕರ್ಣಿ ಉಪಸ್ಥಿತರಿದ್ದರು.